ಶಿವಮೊಗ್ಗ,ಜೂ.11:
ಸದ್ಯದ ಮಟ್ಟಿಗೆ ಶಿವಮೊಗ್ಗ ಸೇಫ್..! ನಾಕೈದು ದಿನದಲ್ಲಿ ಒಬ್ಬರಲ್ಲಿ ಮಾತ್ರ ಸೊಂಕು ಕಾಣಿಸಿಕೊಂಡಿದೆ. ಹಾಗೆಂದು ಜಾಲಿಯಾಗಿರಬೇಡಿ. ಎಚ್ಚರ ನಿಮ್ಮದಾಗಿರಲಿ.
ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಹಾಗೂ ರಾಜ್ಯಕ್ಕೆ ಅದರಲ್ಲೂ ರಾಜದಾನಿಗೆ ಎಂಟ್ರಿಕೊಟ್ಟು ಅಲ್ಲಿ ಸಂಖ್ಯೆ ಹೆಚ್ಚಾದಾಗ ಮತ್ತದೇ ಭಯದ ವಾತಾವರಣ ಎಲ್ಲೆಡೆ ನಿರ್ಮಾಣವಾಗಿತ್ತು.
ಈ ಕೊರೋನಾ ನಾಲ್ಕನೇ ಅಲೆಯ ಭೀತಿ ಎಲ್ಲೆಡೆ ಆರಂಭವಾಗಿದ್ದರೂ ಬಹುತೇಕ ಜನ ಮತ್ತದೇ ತಮ್ಮ ಹಿಂದಿನ ಶೈಲಿ ಅನುಸರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ 474 ಕೊರೋನಾ ಪಾಸಿಟಿವ್ ನಿನ್ನೆ ಕಂಡುಬಂದಿದೆ. ಇದರಿಂದ ರಾಜ್ಯದ ಕೊರೋನಾ ಪಾಸಿಟೀವ್ ಶೇ.3 ರಷ್ಟು ಏರಿಕೆಯಾಗಿರುವುದು ಈ ಭೀತಿಗೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಅಂತಹ ಆತಂಕ ಕಂಡು ಬಂದಿಲ್ಲ. ಒಂದು ತಿಂಗಳಲ್ಲಿ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಸುದ್ದಿ ಮೂಲಗಳಲ್ಲಿ ಮಾತನಾಡಿ ನಾಲ್ಕು ದಿನಗಳ ಹಿಂದೆ ಶಿವಮೊಗ್ಗ ನಗರದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಒಂದು ತಿಂಗಳಲ್ಲಿ ಒಬ್ಬರಲ್ಲಿ ಈ ಸೋಂಕು ಪತ್ತೆಯಾಗಿರುವುದು ಆತಂಕವಲ್ಲದಿದ್ದರೂ ಎಚ್ಚರಿಕೆ ಅಗತ್ಯವಿದೆ. ಮಧ್ಯ ವಯಸ್ಕರೋರ್ವಲ್ಲಿ ಈ ಸೋಂಕು ಪತ್ತೆಯಾಗಿದೆ. ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದಿದ್ದಾರೆ.
ಶಿವಮೊಗ್ಗ ಸದ್ಯ ಸೇಫಾಗಿದೆ. ಆದರೂ ಎಚ್ಚರ ಅಗತ್ಯ.