Site icon TUNGATARANGA

ಶುದ್ದ ಕುಡಿಯುವ ನೀರಿನ ಸರಬರಾಜಿಗೆ ಕ್ರಮ: ಉಪಮೇಯರ್ ಶಂಕರ್ ಗನ್ನಿ

ಶಿವಮೊಗ್ಗ, ಜೂ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶುದ್ದ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮಹಾಪೌರರಾದ ಶಂಕರ್ ಗನ್ನಿ ತಿಳಿಸಿದರು.


ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಪು ಬಣ್ಣದ ನೀರು ಸರಬ ರಾಜು ಆಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಮಂಡ್ಲಿಯಲ್ಲಿರುವ ಕೃಷ್ಣರಾಜೇಂದ್ರ ಕುಡಿಯುವ ನೀರಿನ ಘಟಕದಲ್ಲಿ ಅನೇಕ ವರ್ಷಗಳಿಂದ ಶುದ್ದಿಕರಣಗೊಳ್ಳದಿರುವುದರಿಂದ ಹಾಗೂ ಮಳೆಗಾಲವಾಗಿರುವುದರಿಂದ ಕೆಂಪು ಬಣ್ಣದ ಕುಡಿಯುವ ನೀರು ಸರಬರಾಗುತ್ತಿದೆ. ದೂರುಗಳ ಹಿನ್ನಲೆಯಲ್ಲಿ ಮೇಯರ್, ಆಯು ಕ್ತರು, ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶುದ್ದಿಕರಣಗೊಳಿಸಲು ನಿರ್ಧರಿಸಲಾ ಯಿತು ಎಂದರು.


ಶುದ್ದಿಕರಣ ಘಟಕಕ್ಕೆ ಶಾಸಕರು ಹಾಗೂ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ನಾನು ಭೇಟಿ ನೀಡಿ ಪರಿಶೀಲಿಸಿ ಶುದ್ದಿಕರಣ ಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರಿಂದ ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರರವರ ಮಾರ್ಗದರ್ಶನದಲ್ಲಿ ಕಳೆದ ಶನಿವಾರ ಹಾಗೂ ಭಾನುವಾರದಂದು ಬೆಳ್ಳಗೆಯಿಂದ ರಾತ್ರಿಯವರೆಗೆ ಶುದ್ದಿಕರಿಸಿದ್ದ ರಿಂದ ಶುದ್ದ ಕಡಿಯುವ ನೀರು ಸರಬರಾ ಗುತ್ತಿದೆ ಎಂದರು.
ಶುದ್ದಿಕರಣದಲ್ಲಿ ಜಲಮಂಡಳಿಯ ೩೬ ಸಿಬ್ಬಂದಿ ಹಾಗೂ ೪೦ ಹೊರಗಿನ ಕೆಲಸಗಾರರು ತಮ್ಮ ಜೀವದ ಹಂಗು ತೊರೆದು ಈ ಕಾರ್ಯದಲ್ಲಿ ತೊಡಗಿದ್ದು, ಸುಮಾರು 200 ಕ್ಕೂ ಹೆಚ್ಚು ಲಾರಿ ಲೋಡ್ ಮಣ್ಣನ್ನು ಹೊರಗೆ ಸಾಗಿಸಲಾಗಿದೆ ಎಂದು ಶಂಕರ್ ಗನ್ನಿ ತಿಳಿಸಿದರು.


೨ದಿನ ಹಗಲು ರಾತ್ರಿ ನಡೆದ ಈ ಶುದ್ದಿಕರಣ ಕಾರ್ಯಕ್ಕೆ ಮೇಯರ್, ಆಯುಕ್ತರು, ಪಾಲಿಕೆ ಸದಸ್ಯರು, ಜಲಮಂಡಳಿಯ ಇಂಜಿನಿ ಯರ‍್ಗಳಾದ ರಮೇಶ್, ಸಿದ್ದಪ್ಪ, ಮೋಹನ್, ಜೀವನ್, ತೇಜಸ್ವಿನಿ, ಪಾಲಿಕೆ ಸಿಬ್ಬಂದಿಗಳು ಸಹಕಾರ ನೀಡಿದ್ದಕ್ಕಾಗಿ ಅವರುಗಳಿಗೆ ಅಭಿನಂದಿಸುತ್ತೇನೆ ಎಂದರು.


ಈಗಿರುವ ಶುದ್ದ ಕಡಿಯುವ ನೀರಿನ ಘಟಕವು ಕಡಿಮೆ ಸಾಮರ್ಥ್ಯದಾಗಿರುವುದ ರಿಂದ ಹಾಗೂ ನಗರ ವೇಗವಾಗಿ ಬೆಳೆಯು ತ್ತಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಆಗುತ್ತಿಲ್ಲದಿರುವುದರಿಂದ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಸೂಚನೆಯಂತೆ ಜಲಮಂಡಳಿಯು 40 ಐಆ ಸಾಮರ್ಥ್ಯದ ಹೊಸ ಘಟಕವನ್ನು ಸ್ಥಾಪಿಸಲು

105 ಕೋಟಿ ರೂ ವೆಚ್ಚದ ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅನುಮೋದನೆ ಪಡೆಯುತ್ತೇನೆ ಎಂದು ಶಾಸಕರು ಹೇಳಿದ್ದು, ಹೊಸ ಘಟಕ ಸ್ಥಾಪನೆಗೆ ಜಾಗ ಬೇಕಾಗಿರುವುದರಿಂದ ಘಟಕಕ್ಕೆ ಭೇಟಿ ನೀಡಿದ್ದ ಶಾಸಕರು ಸ್ಥಳಕ್ಕೆ ತಹಶೀಲ್ದಾರ್ ಅವರನ್ನು ಕರೆಸಿ ಕಲ್ಲೂರು ಮಂಡ್ಲಿಯಲ್ಲಿರುವ 12 ಎಕರೆ ಕಂದಾಯ ಇಲಾಖೆಯ ಗೋಮಾಳ ಜಾಗವನ್ನು ಮಂಜೂರು ಮಾಡುಂತೆ ಸೂಚನೆ ನೀಡಿದ್ದು, ಇದಕ್ಕೆ ಅವರು ಮಾಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

Exit mobile version