Site icon TUNGATARANGA

ಚಾಕು ಇರಿತ: ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು

ಶಿವಮೊಗ್ಗ,
ಗಾಂಧಿ ಬಜಾರಿನ ಬಟ್ಟೆ ಮಾರ್ಕೇಟ್ (ಚೋರ್ ಬಜಾರ್) ನಲ್ಲಿ ಮೊನ್ನೆ ಸಂಜೆ ಸೆಂಧಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇಂದು ಬೆಳಗಿನ ಜಾವ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.


ಸುಮಾರು ಒಂಬತ್ತು ತಿಂಗಳ ಹಿಂದೆ ಮೃತ ಸೆಂಧಿ ಲ್‌ನ ಸ್ನೇಹಿತ ಸಂತೋಷ್ (ಜೋಗಿ ಸಂತು) ವಿನ ಜೊತೆಯಲ್ಲಿ ಹಣದ ವ್ಯವಹಾರದ ವಿಷಯದಲ್ಲಿ ಜಗಳ ವಾಗಿದ್ದು, ಆಗ ಸೆಂಧಿಲ್ ಜೋಗಿ ಸಂತುವಿನ ಮೇಲೆ ಅಟ್ಯಾಕ್ ಮಾಡಿದ್ದನು. ಈ ಅಟ್ಯಾಕ್ ನಿಂದ ಗಾಯ ಗೊಂಡಿದ್ದ ನಂತರ ದೊಡ್ಡಪೇಟೆ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ಆಗಿ ಸೆಂಧಿಲ್‌ನನ್ನು ಜೈಲಿಗೆ ಕಳುಹಿಸಿದ್ದರು.


ನಂತರದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಸೆಂಧಿಲ್ ಕಾಲರ್ ಏರಿಸಿಕೊಂಡು ಓಡಾಡುತ್ತಿದ್ದ ಮತ್ತು ಬಟ್ಟೆಯ ಬಜ಼ಾರ್ ನಲ್ಲಿ ಮನೋಜ್ ಟೆಕ್ಸ್‌ಟೈಲ್ಸ್ ಎಂಬ ಹೆಸರಿನ ಬಟ್ಟೆಯಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ.

ಈಗ್ಗೆ ಒಂದು ವಾರದ ಹಿಂದೆ ಜೋಗಿ ಸಂತು ಎದುರಿಗೆ ಸಿಕ್ಕಾಗ ಸ್ವಲ್ಪ ಕಿರಿಕ್ ಕೂಡಾ ಆಗಿತ್ತು. ಒಂದು ಮಾಹಿತಿಗಳ ಪ್ರಕಾರ ಇವರಿಬ್ಬ ರಿಗೂ ನಟೋರಿಯಸ್‌ಗಳ ಒಡನಾಟವಿತ್ತೆಂದು ತಿಳಿದುಬರುತ್ತದೆ. ಒಳ್ಳೆಯ ಹೆಸರನ್ನೇನು ಸಂಪಾದನೆ ಮಾಡದ ಇವರುಗಳು ವ್ಯವಹಾರದಲ್ಲಿ ವೈಮನಸ್ಸು ಹೊಂದಿದ್ದರು.

ಇದೇ ಜೋಗಿ ಸಂತು ಬಜಾರ್‌ನ ಒಳಗಡೆ ಎರಡು ವರ್ಷಗಳ ಹಿಂದೆ ಬಟ್ಟೆಯ ವ್ಯಾಪಾರ ಮಾಡಿಕೊಂಡಿದ್ದ ಹಾಗೆಯೇ ವ್ಯವಹಾರದಲ್ಲಿ ಲಾಸ್ ಆಗಿದ್ದರಿಂದ ಅಂಗಡಿ ತೆಗೆದಿದ್ದ ಕೂಡಾ..

ಮೊನ್ನೆ ಸೆಂಧಿಲ್ ಮೇಲೆ ಅಟ್ಯಾಕ್ ಮಾಡುವಾಗ ಜೋಗಿ ಸಂತು ಮತ್ತು ಮೂವರು ಸ್ನೇಹಿತರ ಜೊತೆಯಲ್ಲಿ ಮಧ್ಯಾಹ್ನದಿಂದ ಸೆಂಧಿಲ್ ಅಂಗಡಿಯ ಮುಂದೆ ಕ್ಯಾಟ್ ವಾಕ್ ಮಾಡಿದ್ದಾರೆ ನಂತರ ರಾತ್ರಿ ಜೋಗಿ ಸಂತು ಹಾಗೂ ಸಹಚರರು ಮಾರ್ಕೆಟ್‌ನ ಒಳಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿ ಎದೆಯ ಭಾಗದಲ್ಲಿ ಚಾಕುವಿನಿಂದ ತಿವಿದ್ದಿದ್ದರು.

Exit mobile version