Site icon TUNGATARANGA

ಎಗ್ಗಿಲ್ಲದೆ ನಡೆಯುತ್ತಿದೆ ಆಕ್ರಮ ಮರಳು ದಂಧೆ ಅಧಿಕಾರಿಗಳು ಡೋಂಟ್ ಕೇರ್!

ಹೊಸನಗರ

ತಾಲ್ಲೂಕು ಬಾಳೆಕೊಪ್ಪ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಇಟಾಚಿಯ ಸಹಾಯ ಹಸ್ತದಿಂದ ಸುಮಾರು ಅಂದಾಜು 80 ರಿಂದ 100 ಲಾರಿಯಷ್ಟು ಮರಳು ಸಂಗ್ರಹಿಸಿಟ್ಟಿದ್ದು ಆದರೆ ಇಲಾಖೆಯವರ ಗಮನಕ್ಕೆ ಅಲ್ಲಿನ ಗ್ರಾಮಸ್ಥರು ಪೋನ್ ಮೂಲಕ ತಿಳಿಸಿದರೂ ಯಾವ ಅಧಿಕಾರಿಗಳಿಗೂ ಈ ಆಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಕಣ್ಣಿಗೆ ಕಾಣದಿರುವುದು ದುರದಷ್ಟಕರ ವಿಷಯವಾಗಿದೆ.


ಹೊಸನಗರ ತಾಲ್ಲೂಕಿನಲ್ಲಿ ಹಗಲು ರಾತ್ರಿ ಎನ್ನದೇ ಪೀಕಪ್ ಲಾರಿಗಳ ಮೂಲಕ ಆಕ್ರಮವಾಗಿ ಮರಳು ಸಾಗಣಿಕೆ ನಡೆಯುತ್ತದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಈ ವರ್ಷದ ಮಳೆಗಾಲದಲ್ಲಿ ಗ್ರಾಮಗಳ ಗ್ರಾಮಸ್ಥರು ಓಡಾಟ ನಡೆಸುವುದೇ ಕಷ್ಟಕರವಾಗಿದೆ ಹೊಸನಗರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಆಕ್ರಮ ಮರಳು ಸಂಗ್ರಹಿಸಿಟ್ಟಿದ್ದಾರೆ ಎಂದು ಹೇಳಲಾಗಿದೆ

ಅದೇ ರೀತಿ ಹೊಸನಗರ ತಾಲ್ಲೂಕು ಬಾಳೆಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಿಂದ 300 ಮೀಟರ್ ದೂರದ ಹೊವಪ್ಪ ಬಿನ್ ನಾಗನಾಯ್ಕ್‌ರವರ ಮನೆಯ ಹಿಂಭಾಗ ಅರಣ್ಯ ಜಾಗದಲ್ಲಿ ಬಲಿಡ್ಯರೊಬ್ಬರು ಸುಮಾರು 80 ಲಾರಿ ಮರಳನ್ನು ದಾಸ್ತಾನು ಮಾಡಿ ಇಟ್ಟಿದರೆಂದು ಹೊಸನಗರ ತಾಲ್ಲೂಕಿನ ಎಲ್ಲ ಅಧಿಕಾರಿಗಳಿಗೂ ಪೋನ್ ಮೂಲಕ ತಿಳಿಸಿದರೂ ಹೊಸನಗರ ಅಧಿಕಾರಿಗಳು ಸ್ತಳಕ್ಕೆ ಹೋಗಿ ಬರುತ್ತಿರುವುದು ಬಿಟ್ಟರೇ ಅವರ ಕಣ್ಣಿಗೆ ದಾಸ್ತಾನು ಮರಳು ಕಣ್ಣಿಗೆ ಬಿಳದಿರುವುದು ಅಲ್ಲಿನ ಗ್ರಾಮಸ್ಥರಿಗೆ ಚಿಂತೆ ಉಂಟು ಮಾಡಿದೆ ಗ್ರಾಮಸ್ಥರು ಬಂದು ದಾಸ್ತಾನು ಇರುವ ಮರಳು ತೋರಿಸಿದರೆ ರಾತ್ರಿ ವೇಳೆಯಲ್ಲಿ ಓಡಾಟ ನಡೆಸುವುದು ಕಷ್ಟ ಎಂದು ಅಧಿಕಾರೆಇಗಳ ಎದರಿಗೆ ಬಾರದೆ ಪೋನ್ ಮೂಲಕ ತಿಳಿಸಿದರೂ

ಪ್ರಯೋಜನವಾಗುತ್ತಿಲ್ಲ ನಮ್ಮ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದೆ ಈ ವರ್ಷ ಮಳೆಗಾಲದಲ್ಲಿ ಓಡಾಟ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.ಇನ್ನದರೂ ಯಾವುದೇ ಅಧಿಕಾರಿಗಳು ಆಕ್ರಮವಾಗಿ ಸಂಗ್ರಹಿಸಿಟ್ಟರು ಮರಳು ಸಕಾರದ ವಶವಾಗುವುದೇ ಕಾದು ನೋಡಬೇಕಲಾಗಿದೆ.

Exit mobile version