Site icon TUNGATARANGA

ಆರೋಗ್ಯವಾಗಿರಲು ಯೋಗ ಅತ್ಯವಶ್ಯಕ : ಕೆ.ಇ.ಕಾಂತೇಶ್

ಮನೆ ಮನೆಗಳಲ್ಲಿ ಸದಾ ಉತ್ತಮ ಆರೋಗ್ಯ ಇರಲು ಕಾಯಿಲೆಯಿಂದ ಮುಕ್ತರಾಗಿ ಸದಾ ಚಟುವಟಿಕೆಯಿಂದ ಇರಲು ಯೋಗ ಅತ್ಯಂತ್ಯ ಪರಿಣಾಮಕಾರಿಯಾದ ಔಷಧ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ.ಕಾಂತೇಶ್ ಹೇಳಿದರು.


ಭಾರತೀಯ ಜನತಾ ಪಕ್ಷ, ಶಿವಗಂಗ ಯೋಗ ಕೇಂದ್ರ ರಾಘವ ಶಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊ ಳ್ಳಲಾದ ಐದು ದಿನಗಳ ವಿಶೇಷ ಯೋಗ, ಪ್ರಾಣಯಾಮ, ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು.
ಇಂದು ಪ್ರಪಂಚ ೧೭೨ ರಾಷ್ಟ್ರಗಳ ಯೋಗವನ್ನು ಒಪ್ಪಿ ನಮ್ಮ ದೇಶದಲ್ಲಿ ಬಂದು ಯೋಗವನ್ನು ಅಭ್ಯಾಸ ಮಾಡಿ ವಿದೇಶಿ ಯವರು ಪರಿಣಿತರಾಗುತ್ತಿದ್ದಾರೆ. ಹಾಗಿದ್ದಾಗ ನಮ್ಮ ದೇಶದ ಪಾರಂಪರಿಕ ಯೋಗ ಪದ್ದತಿಯನ್ನು ನಾವೇಕೆ ಅಳವಡಿಸಿಕೊಳ್ಳಬಾರ ದು. ಪ್ರತಿಯೊಬ್ಬರು ತಪ್ಪದೇ ಇಂತಹ ಯೋಗ, ಪ್ರಣಾಯಾಮ, ಧ್ಯಾನ ಶಿಬಿರಲ್ಲಿ ಪಾಲ್ಗೊಳ್ಳ ಬೇಕೆಂದು ಹೇಳಿದರು

.
ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಎಂ.ಎಲ್.ವೈಶಾಲಿಯವರು ಪಾಲ್ಗೊಂಡು ಯೋಗಭ್ಯಾಸ ಮಾಡಿ ಮಾತ ನಾಡುತ್ತಾ ಮಹಿಳೆಯರ ಅನೇಕ ಸಮಸ್ಯೆಗಳಿಗೆ ಯೋಗಭ್ಯಾಸದಲ್ಲಿ ಪರಿಹಾರವಿದೆ. ಇಂತಹ ಒಳ್ಳೆಯ ಕಾರ್ಯಗಳಿಗೆ ನಮ್ಮ ಇಲಾಖೆಯ ಸಹಕಾರ ಎಂದೆಂದೂ ಇರುತ್ತದೆ ಎಂದು ನುಡಿದರು. ಇನ್ನು ಮುಂದೆ ನಾನು ತಪ್ಪದೇ ಯೋಗಭ್ಯಾಸ ಮಾಡುತ್ತೇನೆ ಎಂದರು.


ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಯೋಗಚಾರ್ಯ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಸಿ.ವಿ.ರುದ್ರರಾಧ್ಯರು ವಿಶೇಷ ಆವರ್ತನ ದ್ಯಾನ ಹಾಗೂ ಸೂರ್ಯನಮಸ್ಕಾರ ದ್ಯಾನದ ಲಾಭಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷ ಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಶಿಬಿರದಲ್ಲಿ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳಾದ ಶ್ರೀಮತಿ ನಂದಿನಿ ಹಾಗೂ ಯೋಗ ಶಿಕ್ಷಕರಾದ ಬಸವರಾಜ್, ಅನುರಾಧ, ವೀಣಾ ಶಿವಕುಮಾರ್, ಮಂಜುಳ, ಜಿ.ಎಸ್. ಒಂಕಾರ್, ವಿಜಯಕೃಷ್ಣ, ಹೆಚ್.ಕೆ.ಹರೀಶ್, ಕಾಟನ್ ಜಗದೀಶ್, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ, ಸಂತೋಷ್, ಕೇಶವ್, ಯೋಗ ಬಂಧುಗಳು ಉಪಸ್ಥಿತರಿದ್ದರು

Exit mobile version