Site icon TUNGATARANGA

ಕುಂಸಿ ಪೊಲೀಸರು ಈ ಹೋಟೆಲ್ ಅಜ್ಜಿಯರ ಪಾಲಿಗೆ ಮರೆಯಲಾಗದ ಮಾಣಿಕ್ಯ..!

ರಾಕೇಶ್ ಸೋಮಿನಕೊಪ್ಪ

ಇಂದಿನ ಈ ಕಾಲಘಟ್ಟದಲ್ಲಿ ಮನುಷ್ಯ ಹಣ, ಅಧಿಕಾರ, ಸಂಪತ್ತಿಗೆ ಆಸೆ ಪಟ್ಟು ತನ್ನ ಮನುಷ್ಯತ್ವವನ್ನೇ ಮರೆತಿರುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಿ ರುತ್ತೇವೆ. ಆದರೆ ಮನುಷ್ಯನಾದವನಿಗೆ ಪರಸ್ಪರರ ಸಂಕಷ್ಟದಲ್ಲಿರುವವರನ್ನು ಕಾಪಾಡುವ ಗುಣವಿರಬೇಕು.

ಮೊದಲು


ಹೌದು, ಮನುಷ್ಯ ಬದುಕಿರುವ ದಿನಗಳಲ್ಲಿ ಉತ್ತಮ ಕಾರ್ಯ, ಉತ್ತಮ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಮನುಷ್ಯನಾಗಲು ಸಾದ್ಯ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಬೀತು ಮಾಡಿದ್ದಾರೆ.

ನಂತರ


ಇದು ಇತರೆ ಕಾರ್ಯಗಳಿಗಿಂತ ಹೇಗೆ ವಿಭಿನ್ನ ಗೊತ್ತಾ? ಕುಂಸಿ ಪೊಲೀಸ್ ಠಾಣೆ ಮಗ್ಗುಲಲ್ಲಿ ಹಲವಾ ರು ವರ್ಷಗಳಿಂದ ಸಣ್ಣ ಹೋಟೆಲ್ ಇಟ್ಟುಕೊಂಡಿದ್ದ ಇಬ್ಬರು ವೃದ್ಧ ಅಜ್ಜಿಯಂದಿರ ಬದುಕ ಕೊನೆಯ ಕ್ಷಣದ ಜೀವನ ಸಾಗಿಸುವ ಬಡಿದಾಟ ಗಳ ನಡುವೆ ಬದುಕು ಸಾಗಿಸು ತ್ತಿದ್ದರು.
ತಾಳಿ ಕಟ್ಟಿದ ಗಂಡನೂ ಇಲ್ಲ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೂ ಇಲ್ಲ. ಇಷ್ಟಾದರೂ ಇಳಿವಯಸ್ಸಿ ನಲ್ಲೂ ಯಾರ ಮುಂದೆಯೂ ಕೈ ಚಾಚದೇ ಸ್ವಾಭಿಮಾ ನದಿಂದ ಬದುಕು ನಡೆಸುತ್ತಿದ್ದಾರೆ. ಆದರೆ ಅವರ ಬದುಕಿಗೆ ಆಧಾರವಾಗಿದ್ದ ಸಣ್ಣ ಹೋಟೆಲ್ ಛಾವಣಿ ಕುಸಿದುಬೀಳುತ್ತಿದೆ. ಇದು ಪೂರ್ಣ ವಾಗಿ ಮುರಿದುಬಿದ್ದರೆ ಈ ವೃದ್ಧೆಯರ ಬದುಕೇ ಮೂರಾ ಬಟ್ಟೆಯಾಗುತ್ತದೆ.


ಮುಂದ್ಯಾರು ನಮಗೆ ದಿಕ್ಕು ಎಂದು ದಿನವೂ ಚಿಂತೆಯಲ್ಲೆ ಮುಳುಗಿರುತ್ತಿದ್ದ ಅಜ್ಜಿಯರ ಕಷ್ಟವನ್ನು ಗಮನಿಸಿದ ಇಲ್ಲಿನ ಪಿಐ ಅಭಯ್ ಪ್ರಕಾಶ್ ಹಾಗೂ ಅವರ ತಂಡ ಇಬ್ಬರು ಅಜ್ಜಿ ಯಂದಿರಿಗೆ ಹೊಸದೊಂದು ರೀತಿಯಲ್ಲಿ ಹೋಟೆಲ್ ನವೀಕರಿಸಿ ಕೊಡಬೇಕೆಂದು ಮನಸ್ಸು ಮಾಡಿದ್ದಾರೆ.
ಗೆದ್ದಲು ಹಿಡಿದ ಮೇಲ್ಚಾವಣಿ ಬದಲಿಸಿ ಹೊಸ ರೀತಿಯ ನವೀಕರಣ ಮಾಡಿ ಹೊಸ ತಗಡಿನ ಸೀಟನ್ನು ಹಾಕಿಸಿದ್ದಾರೆ.


ಕುಂಸಿ ಪೊಲೀಸ್ ಠಾಣೆಯ ಪಿ ಐ ಅಭಯ ಪ್ರಕಾಶ್ ಹಾಗೂ ಸಿಬ್ಬಂದಿ ಮಾನವೀಯತೆ ಮೆರೆದು ಅ ಇಬ್ಬರು ಅಜ್ಜಿಯಂದಿರ ಪಾಲಿಗೆ ಮರೆಯಲಾ ರದ ಮಾಣಿಕ್ಯ ಎಂದರೆ ತಪ್ಪಾಗಲಾರದು. ಅಭಯ್ ಪ್ರಕಾಶ್ ಶಿವಮೊಗ್ಗ ಜಿಲ್ಲೆಯ ಹಲವೆಡೆ ಪೊಲೀಸ್ ಇಲಾಖೆಯಲ್ಲಿ ಎಸೈ ಆಗಿ ಹಾಗೂ ಪ್ರಸ್ತುತ ಕುಂಸಿ ಠಾಣೆಯಲ್ಲಿ ಪಿಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ಅಭಯ್ ಪ್ರಕಾಶ್ ಅವರ ಮಾನವೀಯ ಕಳಕಳಿಯ ಕಾರ್ಯಕ್ರಮಗಳು ಸಾಲು ಸಾಲಾಗಿ ಕಾಣುತ್ತಿವೆ. ಹಾಗಾಗಿ ಅಭಯ್ ಇತರರಿಗಿಂತ ವಿಶೇಷವಾಗಿ ಕಾಣುತ್ತಾರೆ.


ಕುಂಸಿ ಠಾಣೆಯ ಪಕ್ಕದಲ್ಲಿ ಸುಶೀಲಮ್ಮ ಹಾಗೂ ರತ್ನಮ್ಮ ಎಂಬ ಇಬ್ಬರು ಅಜ್ಜಿಯರು ಸುಮಾರು 15 ವರ್ಷಗಳಿಂದ ಸಣ್ಣದೊಂದು ತಗಡಿನ ಶೆಡ್‌ನಲ್ಲಿ ಹೋಟೆಲ್ ನಡೆಸುತ್ತ ಬದುಕುತ್ತಿದ್ದಾರೆ. ಅವರಿಗೆ ಒಬ್ಬನೇ ಗಂಡ. ಗಂಡ ಸಾವನ್ನಪ್ಪಿದ ನಂತರ ಇದ್ದ ಸಣ್ಣ ಹೋಟೆಲ್ ನಿಂದಲೇ ಜೀವನ ಸಾಗುತ್ತಿದೆ. ಆದರೆ, ಬದುಕಿಗೆ ಆಧಾರವಾದ ಸೂರು ಕಳಚಿ ಬೀಳುವಂತಿತ್ತು. ನಿತ್ಯ ಈ ಹೋಟೆಲ್‌ಗೆ ತಿಂಡಿ, ಊಟಕ್ಕೆ ಬರುತ್ತಿದ್ದ ಆರಕ್ಷಣೆ ಠಾಣೆ, ಅರಣ್ಯ ಇಲಾಖೆ, ಮೆಸ್ಕಾಂ ಸಿಬ್ಬಂದಿ ಈ ಅಜ್ಜಿಯರ ಗೋಳು ಕಣ್ಣಾರೆ ಕಂಡಿದ್ದರು. ಪೊಲೀಸ್ ಠಾಣೆಯ ಸಿಬ್ಬಂ ದಿಗಳಿಗೆ ನಿತ್ಯ ಇವರ ಹೋಟೆ ಲ್‌ನಲ್ಲೆ ತಿಂಡಿ-ಊಟ. ಹೋಟೆಲ್ ಗುಡಿಸಲು ಬೀಳುವ ಸ್ಥಿತಿಯಲ್ಲಿದ್ದರೂ ವೃದ್ಧೆಯರು ತಮ್ಮ ಹೋಟೆಲ್‌ನಲ್ಲೆ ಹಸಿದು ಬರುವ ವರಿಗೆ ಕಡಿಮೆ ದುಡ್ಡಿಗೆ ಹೊಟ್ಟೆ ತುಂಬಾ ಅನ್ನ ಹಾಕುತ್ತಿದ್ದರು.

ಪೊಲೀಸರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ:
ಕೆಲ ಪೊಲೀಸರು ಸಣ್ಣ ಗೂಡಂಗಡಿಯನ್ನೂ ಬಿಡದೇ, ದಾರಿಯಲ್ಲಿ ಹೋಗುವವರ ಮೇಲೂ ದರ್ಪ ತೋರಿಸಿ, ಹೆದರಿಸಿ ಕಾನೂನು ಉಲ್ಲಂಘನೆ ನೆಪವೊಡ್ಡಿ ದುಡ್ಡು ಕಿತ್ತುಕೊಳ್ಳುವಂತಹ ಕೆಲ ಪೊಲೀಸರ ಮಧ್ಯೆ ಇಬ್ಬರು ವೃದ್ಧೆಯರ ಸಂಕಷ್ಟ ನೋಡಿ, ಅವರ ಜೀವನಕ್ಕೆ ನೆರವಾಗಿರುವ ಕುಂಸಿ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿದ್ದರು ಸದೃಢವಾಗಿದ್ದರೂ ಸಹ ಬೇರೆಯವರಿಂದ ಕಿತ್ತು ತಿನ್ನುವುದನ್ನು ನೋಡುತ್ತಾರೆ. ಎಲ್ಲ ಸರಿ ಇದ್ದು, ಮೈ, ಕೈ ಗಟ್ಟಿಇದ್ದರೂ ಸಹ ದುಡಿಯಲಾರದೇ ಸೋಮಾರಿಗಳು ಭಿಕ್ಷೆ ಬೇಡುತ್ತಾರೆ. ಆದರೆ, ಈ ವೃದ್ಧೆಯರು ಮುರಿದು ಬೀಳುವಂಥ ಸಣ್ಣ ಹೋಟೆಲ್‌ನಲ್ಲೇ ದುಡಿದು, ಸ್ವಾಭಿಮಾನ ಬದುಕು ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸ್ವಾಭಿಮಾನದಿಂದ ದುಡಿದು ಬದುಕುತ್ತೀವಿ ಎನ್ನುವರಿಗೆ ಕೈಲಾದ ಸಹಾಯ ಮಾಡುವುದು ಮಾನವೀಯತೆ. ಈ ವೃದ್ದೆಯರಿಗೆ ಸಣ್ಣ ಸಹಾಯ ಮಾಡಿದ್ದೇವೆ ಅಷ್ಟೆ.

ಪೊಲೀಸರು ತೋರಿರುವ ಈ ಮಾನವೀಯತೆಗೆ ಹೇಗೆ ಕೃತಜ್ಞತೆ ಅರ್ಪಿಸಬೇಕು ಎಂಬ ಮಾತುಗಳೇ ಬರುತ್ತಿಲ್ಲ. ಇವರ ಈ ಸಹಾಯದಿಂದ ಯಾರಿಗೂ ಬೇಡದೇ, ಹೊರೆಯಾಗದೆ ಸ್ವಾಭಿಮಾನದಿಂದ ಬದುಕುವ ಹುಮ್ಮಸ್ಸು ಬಂದಿದೆ.

ನಿತ್ಯವು ಹೋಟೆಲ್ ಎಲ್ಲಿ ಮುರಿದುಬೀಳುತ್ತದೆ ಎಂಬ ಭಯ ಇತ್ತು. ಇದನ್ನು ಸರಿಪಡಿಸಬೇಕು ಎಂದು ಪ್ರಯತ್ನಪಟ್ಟರೂ, ದುರಸ್ತಿಗೆ ಬೇಕಾದ ದುಡ್ಡು ಹೊಂದಿಸಲು ಅಗಲೇ ಇಲ್ಲ. ಕುಂಸಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಈ ಪ್ರೀತಿ ಎಂದಿಗೂ ಮರೆಯುವುದಿಲ್ಲ –

Exit mobile version