ಶಿವಮೊಗ್ಗ
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶಿವಮೊಗ್ಗ ಶಾಖೆಯ ಗುರುಪುರದಲ್ಲಿರುವ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಗ್ರಾಮೀಣ ಭಾಗದ ಮಕ್ಕಳನ್ನೊಳಗೊಂಡ ಶಾಲೆಗೆ ಶೇ100 ಫಲಿತಾಂಶ ಲಭಿಸಿರುವುದು ಹಿರಿಮೆಯ ಸಂಗತಿ.
ಪರೀಕ್ಷೆಗೆ ಕುಳಿತ 49 ವಿದ್ಯಾರ್ಥಿಗಳಲ್ಲಿ 19 ಅತ್ಯುತ್ತಮ ಶ್ರೇಣಿ, 07 ಡಿಸ್ಟಿಂಕ್ಷನ್,20 ಪ್ರಥಮಶ್ರೇಣಿ, 02 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದು,ಉತ್ತಮ ಸಾಧನೆ ಮಾಡಿದ್ದಾರೆ.
ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯಾದ ಹರಿಣಿ ಎಂ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಪಲಿತಾಂಶ ದಲ್ಲಿ ಈ ಪ್ರತಿಭೆಯು 608 ಅಂಕ ಗಳಿಸಿದ್ದು, ಹಿಂದಿ ವಿಷಯದಲ್ಲಿ 85 ಅಂಕಗಳು ಬಂದಿದ್ದು, ನಂತರ ಮರು ಮೌಲ್ಯ ಮಾಪನದಲ್ಲಿ 15 ಅಂಕಗಳು ಪಡೆಯುವ ಮೂಲಕ 625 ಕ್ಕೆ 623 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾಳೆ.
ಕನ್ನಡ 124, ಇಂಗ್ಲಿಷ್ 99, ಹಿಂದಿ 100, ಗಣಿತ 100, ಸಮಾಜ ವಿಜ್ಞಾನ 100 ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯ ಸಾಧನೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಶಿಕ್ಷಕರು, ಸಿಬ್ಬಂದಿ ವರ್ಗದವರುಅಭಿನಂದಿಸಿದ್ದಾರೆ.