Site icon TUNGATARANGA

ಕಾಲು ಶತಮಾನ ನಂತರ ನಡೆದ ಆನವೇರಿಯ ಮಾವುರದಮ್ಮನ ಜಾತ್ರೆ ಸಂಭ್ರಮದಲ್ಲಿ ಸಾವಿರಾರು ಭಕ್ತರು, ಕೊಂಡಿ ಸಿಡಿ ವೀಕ್ಷಣೆಯೇ ಇಲ್ಲಿ ಅದ್ಬುತ

ಶಿವಮೊಗ್ಗ, ಜೂ.08:
ಆನವೇರಿಯ ಶ್ರೀ ಹಿರಿಮಾವುರದಮ್ಮ ದೇವಿ ಅದ್ಧೂರಿ ಜಾತ್ರೆ ಅಂದರೆ ಅದು ಅತ್ಯಂತ ವಿಶೇಷ. ಕಾಲು ಶತಮಾನ ಸಮೀಪದ ಈ ಜಾತ್ರೆ ಇಂದು ನಡೆದದ್ದು ವಿಶೇಷ. ಅಂದರೆ ಕಳೆದ 24 ವರುಷದ ನಂತರ ಈ ಜಾತ್ರೆ ನಡೆದಿದೆ.
ಹೊಳೆಹೊನ್ನೂರು ಹೋಬಳಿಯ ಆನವೇರಿ ಗ್ರಾಾಮದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ಪ್ರಯುಕ್ತದ ಸಿಡಿ ಉತ್ಸವವು ಇಂದು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.


ಕೊಂಡಿ ಸಿಡಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಸಿಡಿ ಆಡುವ ವ್ರತಧಾರಿಗಳು ಪುಣ್ಯ ತೀರ್ಥ ಸ್ನಾನ ಮಾಡಿ ಮಡಿಯುಟ್ಟು ಕಟ್ಟುನಿಟ್ಟಿನ ಉಪವಾಸ ಹಾಗೂ ದೇವರ ಭಕ್ತಿ ಮೈಗೂಡಿಸಿಕೊಂಡಿರುತ್ತಾರೆ ಎಂಬುದು ಈಗಲೂ ಅತ್ಯಂತ ನಂಬಿಕೆಯ ವಿಶೇಷ


ಸಿಡಿ ಹಾಕಿಕೊಳ್ಳುವ ಭಕ್ತನಿಗೆ ಸಿಡಿ ಕಂಬದ ಕೊಂಡಿಗೆ ವ್ರತಧಾರಿಯ ಬೆನ್ನು ಭಾಗದ ಚರ್ಮಕ್ಕೆ ಬಂಡಾರ ಹಾಕಿ ಚೂಪಾದ ಕೊಂಡಿ ಸಿಲುಕಿಸಲಾಗುತ್ತದೆ. ಬಳಿಕ ಮೂರು ಸುತ್ತು ಸಿಡಿ ಕಂಬ ತಿರುಗಿಸಿ ಭಕ್ತಿಿಯ ಪರಾಕಷ್ಠೆ ಮೆರೆದರು.
ಈ ವೇಳೆ ಸೇರಿದ್ದ ಜನಸ್ತೋಮ ಚಪ್ಪಳೆ, ಶಿಳ್ಳೆ ಹೊಡೆದು ಉದೋ ಉದೋ ಎಂದು ದೇವರ ಹರ್ಷೋದ್ಘಾರ ಕೂಗಿದರು.


ಇದೊಂದು ವಿಶೇಷ ಹಾಗೂ ವಿಶಿಷ್ಠ ಆಚರಣೆ ಆಗಿರುವುದರಿಂದ ಸಹಜವಾಗಿ ಎಲ್ಲರಲ್ಲೂ ಕೌತಕ ಮೂಡಿರುತ್ತದೆ. ಇದರಿಂದಲೇ ಈ ಸಿಡಿ ಉತ್ಸವ ನೋಡಲು ಸುತ್ತಮುತ್ತಲ ಗ್ರಾಾಮಗಳಿಂದ ಸಾಗರೋಪಾದಿಯಲ್ಲಿ ಸೇರಿದ್ದ ಭಕ್ತರು ಕಣ್ತುಂಬಿಕೊಂಡರು.
ಹಿಂದಿನ ದಿನವಾದ ಮಂಗಳವಾರದಂದು ಸುತ್ತಲ ಏಳು ಗ್ರಾಮಗಳ ಮನೆಯಿಂದ ಮಹಿಳೆಯರು ಅಮ್ಮನವರ ದೇವಸ್ಥಾಾನಕ್ಕೆ ತೆರಳಿ ಮಡಿಲಕ್ಕಿ, ಸೀರೆ ಹಾಗೂ ಕುಪ್ಪಸ ಸಮರ್ಪಿಸಿದರು.


ಬಳಿಕ ದೇವಿಯ ದರ್ಶನ ಪಡೆದು ಹಣ್ಣು ಕಾಯಿ ಪೂಜೆ ಮಾಡಿಸಿ ಕುಟುಂಬದ ಆರೋಗ್ಯ, ಸುಖ, ಶಾಂತಿ, ನೆಮ್ಮದಿ ಹಾಗೂ ಸಂಪತ್ತು ವೃದ್ಧಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಶ್ರೀ ದೇವಿಗೆ ರಜತ ಮುಖವಾಡ ಹಾಕಲಾಗಿದ್ದು ವಿಶೇಷ ಪುಷ್ಪಾಲಂಕಾರ ಮಾಡಿದ್ದು ಭಕ್ತರ ಮನಸೂರೆಗೊಂಡಿತು. ಇಡಿ ಗ್ರಾಮ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿತ್ತು. ಮಂಗಳವಾರ ರಾತ್ರಿಲೇಸರ್ ಲೈಟ್ ಹಾಗೂ ಡಿಜೆ ಸಂಗೀತಕ್ಕೆ ಎಲ್ಲರೂ ಕುಣಿದು ಕಪ್ಪಳಿಸಿ ಸಂತಸಗೊಂಡರು.

ತುಂಗಾತರಂಗ ದಿನಪತ್ರಿಕೆ, ಶಿವಮೊಗ್ಗ

9448256183 ಗಜೇಂದ್ರ ಸ್ವಾಮಿ


ಪುರಾಣ ಪ್ರಸಿದ್ಧ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ಉತ್ಸವ ಮಾಡಲು ಸುಮಾರು 24 ವರ್ಷಗಳಿಂದಲೂ ದೇವಿಯು ಅಪ್ಪಣೆ ನೀಡಿರಲಿಲ್ಲ. ಆದರೆ ಇತ್ತೀಚೆಗಷ್ಟೆ ದೇವಿ ಜಾತ್ರೆ ಮಾಡಲು ಅಪ್ಪಣೆ ನೀಡಿದ್ದರ ಮೇರೆಗೆ 24 ವರ್ಷಗಳ ನಂತರನ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು.

Exit mobile version