Site icon TUNGATARANGA

ಅನಧಿಕೃತ ಸಹಾಯಕರ ನೇಮಕ ಮಾಡಿಕೊಂಡರೆ ಕ್ರಮ: ಮೇಯರ್ ಸುನೀತಾ ಅಣ್ಣಪ್ಪ

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರನ್ನು ಬಿಟ್ಟು ಅಧಿಕಾರಿಗಳು ಅನಧಿಕೃತವಾಗಿ ಸಹಾಯಕರನ್ನು ನೇಮಕ ಮಾಡಿಕೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಥವಾ ನಾವೇ ಅನಧಿಕೃತ ಸಹಾಯಕರನ್ನು ಎಸಿಬಿ ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದರು.


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಎಸಿಬಿ ದಾಳಿಯಲ್ಲಿ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಓರ್ವ ಕಂಪ್ಯೂಟರ್ ಅಪರೇಟರ್ ಪಾಲಿಕೆ ನೌಕರನೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿ ಅನಧಿಕೃತವಾಗಿ ಸಹಾಯಕನನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ. ಎಸಿಬಿ ದಾಳಿಯಿಂದಾಗಿ ಗಮನಕ್ಕೆ ಬಂದಿರುವುದರಿಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.


ಅನಧಿಕೃತ ವ್ಯಕ್ತಿ ಕಚೇರಿ ಕೊಠಡಿಯೊಳಗೆ ಕೆಲಸಕ್ಕೆ ನೇಮಿಸಿಕೊಂಡಿರುವುದು ತಪ್ಪು. ಆ ವ್ಯಕ್ತಿ ಕಂಪ್ಯೂಟರ್ ಲಾಗಿನ್ ಐಡಿ ನೀಡಿರುವುದು ತಪ್ಪು. ಮುಂದೆ ಇತಂಹ ತಪ್ಪಾದರೆ ಆ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು

Exit mobile version