Site icon TUNGATARANGA

ರಾಜಕೀಯ ನಿವೃತ್ತಿ ಜೀವನದ ಕೊನೆ ಗಳಿಗೆಯಲ್ಲಿ ಶಾಸಕ ಈಶ್ವರಪ್ಪನವರಿಗೆ ಕಟುಕತನದ ಮಾತುಗಳೇ ಹವ್ಯಾಸವಾಗಿದೆ:ಎಚ್.ಪಿ . ಗಿರೀಶ್ ಆರೋಪ

ರಾಜಕಾರಣದಲ್ಲಿ ಟೀಕೆಗಳು ಸಹಜ. ಆದರೆ ಈಶ್ವರಪ್ಪನವರ ಟೀಕೆಗಳು ಮನುಷ್ಯತ್ವ ಮೀರಿವೆ. ಕಾಂಗ್ರೆಸ್ ನ ಕುರಿತಂತೆ ಬೈಗುಳದ ಹೇಳಿಕೆಗಳು ಅವರ ನಾಲಿಗೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ

ರಾಜಕೀಯ ನಿವೃತ್ತಿ ಜೀವನದ ಕೊನೆ ಗಳಿಗೆಯಲ್ಲಿ ಶಾಸಕ ಈಶ್ವರಪ್ಪನವರಿಗೆ ಕಟುಕತನದ ಮಾತುಗಳೇ ಹವ್ಯಾಸವಾಗಿದೆ , ಅವರಿಗೆ ಇಷ್ಟುಹೊತ್ತಿಗೆ ಪಾಪಪ್ರಜ್ಞೆ ಕಾಡಬೇಕಿತ್ತು. ಅಮವಾಸ್ಯೆ-ಹುಣ್ಣಿಮೆಗಳಲ್ಲಿ ಹೀಗೆ ಬಾಯಿಗೆ ಬಂದಂತೆ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ. ವರಿಷ್ಠರು ಅವರಿಗೆ ಒಂದು ಯಂತ್ರ ಕಟ್ಟಬೇಕಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ

ಮನುಷ್ಯತ್ವ ಇಲ್ಲದೆ ಕೇವಲ ರಾಜಕಾರಣಕ್ಕಾಗಿ ಅಥವಾ ನನಗಲ್ಲದಿದ್ದರೆ ನನ್ನ ಮಗನಿಗೆ ಟಿಕೇಟ್ ಸಿಗಬಹುದೆಂಬ ಭ್ರಮೆಯಲ್ಲಿ ಇರುವ ಅವರು, ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ

ಕಾಲ ಹೀಗೆ ಇರುವುದಿಲ್ಲ. ಅವರು ಧರ್ಮ, ಸಂವಿಧಾನ, ಧ್ವಜ ಕೊನೆಗೆ ಮನುಷ್ಯರ ಬಗ್ಗೆಯೇ ಆಡಿದ ಮಾತುಗಳು ಅವರಿಗೆ ಶಾಪವಾಗುತ್ತದೆ. ಅವರ ಕಿಚ್ಚು ಅವರನ್ನೇ ಸುಡುತ್ತದೆ. ಅವರ ಒಳ್ಳೆಯ ಗುಣಗಳು ಹೊಳೆಯಲ್ಲಿ ಹುಣಸೆ ಹಣ್ಣು ಕಿವಚಿದಂತಾಗಿದೆ. ಕೆಟ್ಟ ಮೇಲಾದರೂ ಅವರಿಗೆ ಬುದ್ಧಿಬರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ

ಬಿಜೆಪಿ ಹೈಕಮಾಂಡ್ ಮತ್ತು ಆರೆಸ್ಸೆಸ್ ಗೆ ಯುವ ಕಾಂಗ್ರೆಸ್ ಒಂದು ಮನವಿ ಮಾಡುತ್ತದೆ ಈಶ್ವರಪ್ಪನವರಿಗೆ ಈ ಬಾರಿಯೂ ಕೂಡ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ನೀಡಬೇಕು , ಅವರ ರಾಜಕೀಯ ನಿವೃತ್ತಿ ಜೀವನವನ್ನು ಸೋಲಿಸುವ ಮುಖಾಂತರ ಮನೆಗೆ ಕಳಿಸುವುದು ಯುವ ಕಾಂಗ್ರೆಸ್ ಗುರಿಯಾಗಿದೆ ಎಂದರು

Exit mobile version