Site icon TUNGATARANGA

ವಿದ್ಯುತ್ ತೊಂದ್ರೆ ಆದ್ರೆ ನೀವೇ ಹೊಣೆಗಾರರು, ಆನವೇರಿ ಜಾತ್ರೆಯಲ್ಲಿ ಮೆಸ್ಕಾಂ ಎಚ್ಚರಿಕೆ, ಎರಡು ದಿನ ಎಲ್ಲಿ ಕರೆಂಟ್ ಕಟ್!

ಶಿವಮೊಗ್ಗ, ಜೂ.05: 

ಆನವೇರಿ ಗ್ರಾಮದಲ್ಲಿ ದಿ: 05/06/2022 ರಿಂದ ದಿ: 09/06/2022 ರವರೆಗೆ ನಡೆಯುವ ಶ್ರೀ ಹಿರಿ ಮಾವುರದಮ್ಮ ದೇವಿಯ ಜಾತ್ರಾ ಮಹೋತ್ಸವ ಆಚರಿಸುತ್ತಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ಸಾಮೂಹಿಕ ಔತಣ ಕೂಟ ಏರ್ಪಡಿಸುವವರು, ವಿದ್ಯುತ್ ಲೈನ್/ಕಂಬಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುವವರು, ಜಾತ್ರೆಗೆ ಮಳಿಗೆ ಹಾಕುವ ವರ್ತಕರು, ಮನೋರಂಜನಾ ಆಟಿಕೆಯವರು, ಸರ್ಕಸ್ / ನಾಟಕ ಕಂಪನಿಯವರು ಇತ್ಯಾದಿಯವರು ಮೆಸ್ಕಾಂನ ಪೂರ್ವಾನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ಮೆಸ್ಕಾಂ ವಿದ್ಯುತ್ ಜಾಲದಿಂದ ವಿದ್ಯುತ್‍ನ್ನು ಉಪಯೋಗಿಸಬಾರದು. ಒಂದು ವೇಳೆ ಬಳಸಿದ್ದಲ್ಲಿ, ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ, ಜೀವ ಹಾನಿಯಂತಹ ಘಟನೆಗಳು ಸಂಭವಿಸಿದಲ್ಲಿ ಮೆಸ್ಕಾಂ ಹೊಣೆಯಾಗಿರುವುದಿಲ್ಲ ಹಾಗೂ ಪೂರ್ವಾನುಮತಿ ಪಡೆಯದೆ ವಿದ್ಯುತ್ ಬಳಸುವವರ ವಿರುದ್ಧ ವಿದ್ಯುತ್ ದುರ್ಬಳಕೆ/ಕಳ್ಳತನ ಪ್ರಕರಣ ದಾಖಲಿಸಿಕೊಂಡು ಭಾರತೀಯ ವಿದ್ಯುಚ್ಛಕ್ತಿ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೊಳೆಹೊನ್ನೂರು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂನಿಜಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜೂ 7-8ರಂದು ಇಲ್ಲಿ ಕರೆಂಟಿರೊಲ್ಲ

ಶಿವಮೊಗ್ಗ: ಜೂ.5:

ದಿ:07/06/2022 ಮತ್ತು ದಿ: 08/06/2022 ರಂದು ಎರಡು ದಿನಗಳು ರೈಲ್ವೆ ಬ್ರಿಡ್ಜ್ ಕಾಮಗಾರಿ ಇರುವುದರಿಂದ ಪುರಲೆ ಮತ್ತು ಜಾವಳ್ಳಿ 11 ಕೆ.ವಿ. ಮಾರ್ಗ ಮುಕ್ತತೆ ನೀಡಲಾಗಿದ್ದು, ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಗುರುಪುರ, ಪುರಲೆ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಹಸೂಡಿ ರಸ್ತೆ, ವೆಂಕಟೇಶನಗರ, ಸುಬ್ಬಯ್ಯ ಆಸ್ಪತ್ರೆ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Exit mobile version