ಶಿವಮೊಗ್ಗ,
ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆಯುವೇದ ಆಸ್ಪತ್ರೆಯಲ್ಲಿ ಜೂನ್ 6 ರ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ5 ರವರೆಗೆ ಮೂಳೆಯ ಸಾಂದ್ರತೆ ಉಚಿತ ತಪಾಸಣಾ ಶಿಬಿರ (ಬಿಎಂಡಿ ಸ್ಕ್ಯಾನ್) ಏರ್ಪಡಿಸ ಲಾಗಿದೆ.
ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆಯೇ ಮೂಳೆಯ ಲ್ಲಿನ ಕ್ಯಾಲ್ಸಿಯಂ ಹಾಗೂ ಇತರೆ ಖನಿಜಗಳು ಕಡಿಮೆ ಯಾಗಿ ಗಂಟುನೋವು, ಬೆನ್ನು ನೋವು, ಕುತ್ತಿಗೆ ನೋವು, ಕಾಲು ಪಾದದ ಅಡಿ ನೋವು ಶುರುವಾಗು ತ್ತದೆ
. ಇದನ್ನು ಆಸ್ಟಿಯೋ ಪೋರೋಸಿಸ್ ಎಂದು ಕರೆಯಲಾಗುತ್ತದೆ. ಮೂಳೆಯ ಸಾಂದ್ರತೆ ತಪಾಸಣೆ (ಬಿಎಂಡಿ ಸ್ಕ್ಯಾನ್) ಮಾಡಿಸಿದರೆ ಕ್ಯಾಲ್ಸಿಯಂನ ಅಗತ್ಯತೆ ಮತ್ತು ಮೂಳೆ ಸವೆತವನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯ. ಅಲ್ಲದೆ ಸಸ್ಯಜನ್ಯ ಕ್ಯಾಲ್ಸಿಯಂ ಸೇವಿಸಿದರಿಂದ ತೊಂದರೆಯನ್ನು ತಪ್ಪಿಸಬಹುದು.
ಸಮಾಲೋಚನೆ ಉಚಿತವಾಗಿ ದೊರೆಯುತ್ತದೆ. ಔಷಧಿಗಳು ಮತ್ತು ರಕ್ತ ಪರೀಕ್ಷೆಯ ಮೇಲೆ ವಿಶೇಷ ರಿಯಾಯಿತಿ ಇರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಮೊ:: 7259685135, 08182-246360ಸಂಪರ್ಕಿಸಿ.