Site icon TUNGATARANGA

ಹೊಸನಗರ/ ರಾಘವೇಶ್ವರ ಭಾರತಿ ಶ್ರೀಗಳಿಂದ ತಪಸ್ಸಿನಂತೆ ಗೋ ಸಂರಕ್ಷಣೆ: ಬಿ. ವೈ. ರಾಘವೇಂದ್ರ

ಹೊಸನಗರ,ಜೂ.04:
ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಗೋ ಸೇವೆ, ಜಾಗೃತಿ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮಾಡಿದ್ದಾರೆ,
ನಮ್ಮ ರಾಜ್ಯ ಸರ್ಕಾರವೂ ಸಹ ಗೋವಿನ ರಕ್ಷಣೆಗೆ ಬದ್ದವಾಗಿದೆ, ಮತ್ತು ಈ ಗೋವಿನ ಹತ್ಯೆ ಮಾಡುವವರ ವಿರುದ್ಧ ಕಠಿಣ ಕಾನೂನಿನ ಕ್ರಮವನ್ನು ಜರುಗಿಸುತ್ತಿದೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.
ಈ ಪುಣ್ಯ ಕ್ಷೇತ್ರದಲ್ಲಿ ಅತ್ಯಂತ ಸುಂದರವಾಗಿ ವಾಸ್ತು ಶಿಲ್ಪದ ಮೂಲಕ ನಿರ್ಮಾಣವಾಗಿರುವ ಶ್ರೀ ಚಂದ್ರಮೌಳೀಶ್ವರ ದೇವರ ಭವ್ಯ ದೇವಾಲಯ ನಿರ್ಮಾಣವಾಗಿ ಇಂದು ಧ್ವಜ ಸ್ತoಭದ ಪ್ರತೀಷ್ಠಾಪನ ಕಾರ್ಯವಾಗಿದೆ ಮುಂದಿನ ದಿನದಲ್ಲಿ ಸುಕ್ಷೇತ್ರವಾಗಿ ಹೊರಹೊಮ್ಮಲಿದೆ ಇಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಕಲ್ಪಿಸಿದ ಇಲ್ಲಿನ ಜನತೆ ಮತ್ತು ಶ್ರೀಗಳಿಗೆ ನನ್ನ ನಮನಗಳು ಎಂದು ತಿಳಿಸಿದರು.


ಹೊಸನಗರ ತಾಲೂಕಿನ ಶ್ರೀ ರಾಮಚಂದ್ರಾ ಪುರಮಠದ ಶ್ರೀ ಚಂದ್ರಮೌಳೀಶ್ವರ ದೇವಾಲಯದ ಶ್ರೀದೇವರ ಧ್ವಜ ಸ್ತoಭ ಪ್ರತೀಷ್ಠಾ ಕಾರ್ಯಕ್ರಮದಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭಾಗವಹಿಸಿ ಮಾತನಾಡಿದರು.
ಹೊರನಾಡು ಕ್ಷೇತ್ರದ ಧರ್ಮದರ್ಶಿಗಳಾದ ಡಾ.ಭೀಮೇಶ್ವರ ಜೋಶಿ ಅವರು, ಶಾಸಕರಾದ ಹರತಾಳು ಹಾಲಪ್ಪ
ಸಿಗಂದೂರು ಪ್ರಧಾನ ಅರ್ಚಕರಾದ ಶೇಷಗಿರಿ ಭಟ್
ಹಟ್ಟಿಅಂಗಡಿಯ ಪ್ರಧಾನ ಅರ್ಚಕರಾದ ಬಾಲಚಂದ್ರ ಭಟ್
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ, ಆರ್. ಎಸ್ ಹೆಗಡೆ, ಪ್ರಭಾಕರ್
ವಿಷ್ಣು ಕುಚುಕಾಡು ಮತ್ತಿತರರು ಉಪಸ್ಥಿತರಿದ್ದರು.

Exit mobile version