Site icon TUNGATARANGA

SHIMOGA/ ಆಚಾರ್ಯ ತುಳಸಿ ರಾಷ್ಟೀಯ ವಾಣಿಜ್ಯ (ATNCC) ಕಾಲೇಜಿಗೆ ಏಳು ರ‍್ಯಾಂಕ್

ಶಿವಮೊಗ್ಗ, ಜೂ.04:
ಕಳೆದ ಅಕ್ಟೋಬರ್‌ನಲ್ಲಿ ನಡೆದ ಅಂತಿಮ ಬಿ.ಕಾಂ. ಮತ್ತು ಬಿ.ಬಿ.ಎ. ಪರೀಕ್ಷೆಯಲ್ಲಿ ಇಲ್ಲಿನ ಎ.ಟಿ.ಎನ್.ಸಿ. ಕಾಲೇಜಿನ ಒಟ್ಟು 07 ವಿದ್ಯಾರ್ಥಿಗಳು ವಿವಿಧ ರ‍್ಯಾಂಕ್‌ಗಳಿಸಿರುತ್ತಾರೆ.


ಬಿ.ಕಾಂನಲ್ಲಿ ಕು. ಮೇಘನಾ ವಿ. 1ನೇ ರ‍್ಯಾಂಕ್, ಕು. ಪ್ರಮೋದ್ ಆರ್. 4ನೇ ರ‍್ಯಾಂಕ್, ಕು. ಪ್ರಿಯಾಂಕ ಜಿ. 7ನೇ ರ‍್ಯಾಂಕ್, ಕು. ನಂದೀಶ್ ಬಿ. ಹೊಸಂಗಡಿ 9ನೇ ರ‍್ಯಾಂಕ್, ಕು. ಮೈತ್ರಿ ಜೆ. 10ನೇ ರ‍್ಯಾಂಕ್. ಬಿ.ಬಿ.ಎ.ನಲ್ಲಿ ಕು. ಬಸವರಾಜ್ ಹೆಚ್. ಎಂ. 4ನೇ ರ‍್ಯಾಂಕ್, ಕು. ಪ್ರಿಯಾಂಕ 4ನೇ ರ‍್ಯಾಂಕ್ ಪಡೆದಿರುತ್ತಾರೆ.
ಈ ವಿದ್ಯಾರ್ಥಿಗಳು ಕಾಲೇಜಿಗೆ, ರಾಷ್ಟೀಯ ಶಿಕ್ಷಣ ಸಂಸ್ಥೆಗೆ ಹಾಗೂ ಶಿವಮೊಗ್ಗಕ್ಕೆ ಕೀರ್ತಿಯನ್ನು ತಂದಿರುತ್ತಾರೆ. ಸದರಿ ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ಆಡಳಿತ ಮಂಡಳಿಯ ಪರವಾಗಿ ಪ್ರಾಂಶುಪಾಲರಾದ ಪ್ರೊ. ಹೆಚ್.ಎಂ. ಸುರೇಶರವರು ಹೃತ್ಪೂರ್ವಕ. ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Exit mobile version