ಶಿವಮೊಗ್ಗ,
ಸೈಕಲ್ ಬಳಕೆಯಿಂದ ದೇಹ, ಮನಸ್ಸು ಸದೃಢವಾಗುವುದರ ಜೊತೆಗೆ ಹಲವು ಕಾಯಿಲೆಗ ಳಿಂದ ದೂರ ಇರುತ್ತೇವೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ ನುಡಿದರು.
ಅವರು ಇಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಆಯೋಜಿಸಿದ್ದ ವಿಶ್ವ ಬೈಸಿಕಲ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಸೈಕಲ್ ಬಳಸುವುದರಿಂದ ಇಂಧನ ಉಳಿತಾಯ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಬಹುದು. ಸೈಕಲ್ ಬಳಕೆಯಿಂದ ನೂರಾರು ಉಪಯೋಗವಿದೆ. ಆದ್ದರಿಂದ ಪ್ರತಿಯೊಬ್ಬರು ಸಣ್ಣ ಕೆಲಸಗಳಿಗೆ ನಿತ್ಯ ಸೈಕಲ್ ಬಳಸಬೇಕು ಎಂದು ನುಡಿದರು.
ಪ್ರತಿ ವರ್ಷ ಜೂನ್ ೩ ರಂದು ವಿಶ್ವ ಬೈಸಿಕಲ್ ದಿನಾಚರಣೆಯನ್ನು ಪ್ರಪಂಚಾದ್ಯಂತ ಆಚರಿಸಲಾಗುತ್ತಿದೆ. ಅದರಂತೆ ಭಾರತ ಸರ್ಕಾರದ ವಸತಿ ಮತ್ತು ನಗರ ಯೋಜನೆಗಳ ಮಂತ್ರಾಲಯವು ಇದರಡಿ ಬರುವ ಸ್ಮಾರ್ಟ್ ಸಿಟಿ ಮಿಷನ್ ಮೂಲಕ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಜೂನ್ 3 ರಂದು ಬೈಸಿಕಲ್ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಇಂದು ನಗರದಲ್ಲಿ ಸೈಕಲ್ ರ್ಯಾ ಲಿ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಟಿ.ವಿ. ಮಂಜುನಾಥ್, ಅನಿತಾ ರವಿಶಂಕರ್, ವಿಶ್ವಾಸ್ ಮತ್ತಿತರರಿದ್ದರು.