Site icon TUNGATARANGA

ಗಣಪನಿಗೇ ಟೈಂ ಬರೆದ ಕೊರೊನಾ! …ಒಂದೇ ದಿನ ಟೈಮ್

ಶಿವಮೊಗ್ಗ,ಆ.18:
ನಮ್ ಶಿವಮೊಗ್ಗದಲ್ಲಿ ನಮ್ ಗಣಪ ಒಂದು ದಿನ ಅದೂ ಪೂಜೆಯ ಹೊತ್ತಿನಲ್ಲಿ ಪೂಜೆ ಮುಗಿಸ್ಕೊಂಡು ಅಮ್ಮನ ಅಂದರೆ ಗಂಗಾ ಮಾತೆಯ ಮಡಿಲಲ್ಲಿ ಸೇರಬೇಕು….,
ಅಚ್ಚರಿ ಬೇಡ, ಕೊರೊನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಷರತ್ತು ಬದ್ದ ಅನುಮತಿ ನೀಡಿದ ಬೆನ್ನಲ್ಲೇ ಶಿವಮೊಗ್ಗ ಆಡಳಿತ ವ್ಯವಸ್ಥೆ ಇಂತಹದೊಂದು ನಿರ್ಣಯ ಕೈಗೊಂಡಿದೆ.
ಈಶ್ವರಪ್ಪ ಅವರ ನೇತೃತ್ವದ ಸಭಾ ನಿರ್ಣಯ
ಈ ಬಾರಿಯ ಗಣಪತಿ ಉತ್ಸವ ವನ್ನು ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಣಪತಿ ಸಂಘ ಸಂಸ್ಥೆಗಳ ಸಂಘ ಪರಿವಾರಿಗಳ ಜೊತೆ ಚರ್ಚೆ ನಡೆಸಿ ಜಿಲ್ಲಾದ್ಯಂತ ಒಂದು ದಿನಕ್ಕೆ ಆಚರಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಈಗಷ್ಟೆ ಜಿಲ್ಲಾಧಿಕಾರಿ ಗಳ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ.ಈ ಆದೇಶವನ್ನ ಜಿಲ್ಲೆಯ ಎಲ್ಲಾ ಗಣಪತಿ ಸಮಿತಿಯವರು ಪ್ರೋತ್ಸಾಹಿಸಿ ಕೈಜೋಡಿಸಲು ಮನವಿಯೊಂದಿಗೆ ಆದೇಶ ನೀಡಲಾಗಿದೆ ಎಂದರು.
ಕಳೆದ ಬಾರಿ ಯಾವ ಗಣಪತಿ ಸಮಿತಿಗಳು ಗಣಪತಿಯನ್ನ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದವೋ ಈ ಬಾರಿಯೂ ಕೂಡ ಒಂದು ದಿನದ ಆಚರಣೆಗೆ ಅವಕಾಶ ನೀಡಲಾಗಿದೆ ಎಂದರು.
ಸರ್ಕಾರದ ಮಾರ್ಗಸೂಚಿಯಲ್ಲಿ ವಾರ್ಡ್/ಗ್ರಾಮಕ್ಕೆ ಒಂದೇ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿತ್ತು. ಶಿವಮೊಗ್ಗ ಜಿಲ್ಲಾಡಳಿತ ಇದಕ್ಕೆ ಮುನ್ನಚ್ಚರಿಕೆ ಕ್ರಮ ಜರುಗಿಸಿ ಕಳೆದ ವರ್ಷದಂತೆ ಈ ಬಾರಿಯೂ ಪ್ರತಿಯೊಂದು ಗಣಪತಿ ಸಮಿತಿಗೆ ಅವಕಾಶ ನೀಡಲಾಗಿದೆ ಎಂದರು.
ಕೊರೋನ ಹಿನ್ನಲೆ ಮನೆಯಲ್ಲಿ ಇಡುವ ಗಣಪತಿಗೆ ಐದು ಜನ ಸೀಮಿತ, ಸಾರ್ವಜನಿಕ ಗಣಪತಿಗೆ 20 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ, ಮೆರವಣಿಗೆ, ಮೈಕ್ ಸೆಟ್, ಡೊಳ್ಳು ಯಾವುದೇ ಮನರಂಜನೆ ಹಾಗೂ ವಿದ್ಯುತ್ ಸಂಪರ್ಕವಿಲ್ಲದೆ ಬೆಳಗ್ಗೆ ತಂದ ಗಣಪತಿಯನ್ನ ಸಂಜೆ 5 ರೊಳಗೆ ವಿಸರ್ಜನೆ ಮಾಡುವಂತೆ ಆದೇಶಿಸಲಾಗಿದೆ ಎಂದರು.
ಗಣಪತಿ ಹಬ್ಬದ ಆಚರಣೆಯು ಪ್ರತಿವರ್ಷದಂತೆಯೂ ಈ ವರ್ಷವೂ ಕೂಡ ನಡೆಯುತ್ತದೆ ಆದರೆ ಪ್ರತಿಷ್ಠಿತ ಹಿಂದೂ ಮಹಾ ಸಭಾ ಗಣಪತಿ, ರಾಮಣ್ಣ ಶ್ರೇಷ್ಠಿ, ತುಳಜಾಭವನಿ, ಅಶೋಕ ರಸ್ತೆ ಓಂ ಗಣಪತಿ ಸೇರಿದಂತೆ ಇತರೆ ಸಮಿತಿಗಳು 4 ಅಡಿಗಿಂತ ಎತ್ತರ ಇರುವಂತಿಲ್ಲ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹಾಜರಿದ್ದರು.
ಏನು ಕಾಲ ಬಂತಪ್ಪ ವಿಘ್ನ ವಿನಾಶಕ. ಕೊರೊನಾ ತೊಲಗಿಸು

Exit mobile version