ಶಿವಮೊಗ್ಗ, ಜೂ.2:
ಪತ್ರಿಕಾ ರಂಗದಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ ಶಿವಮೊಗ್ಗ ನಗರದ ಹತ್ತಾರು ಸಾಮಾಜಿಕ ಸೇವಾ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ನಿಕಟಪೂರ್ವ ಸಂಪಾದಕ ಕೆಬಿ ರಾಮಪ್ಪ ಅವರು ಇನ್ನಿಲ್ಲ.
ಶಿವಮೊಗ್ಗ ಟೈಮ್ಸ್ ನ ಹಿಂದಿನ ಸಂಪಾದಕರು, ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾಜಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಾಲ್ಮೀಕಿ ಸಮಾಜದ ಮುಖಂಡರು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಆದ ಕೆ.ಬಿ.ರಾಮಪ್ಪ ನವರು ಇಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ವಿನೋಬ ನಗರದ ಸ್ವಗೃಹದಲ್ಲಿ ನಿಧಾನರಾದರು.
ಅವರಿಗೆ ಎಂಬತ್ತಾರು ವರುಷ ವಯಸ್ಸಾಗಿತ್ತು. ಅವರು ಪುತ್ರ ಪತ್ರಕರ್ತ ಅಭಿನಂದನ್ ಸೇರಿದಂತೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರು ಹಾಗೂ ಶಿವಮೊಗ್ಗದ ಪತ್ರಿಕಾ ಜಗತ್ತಿನ ಸರ್ವರನ್ನೂ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ರೋಟರಿ ಚಿತಾಗಾರದಲ್ಲಿ ನಾಳಿನ ಮಧ್ಯಾಹ್ನ 12.30 ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿವಮೊಗ್ಗ ವಿನೋಬನಗರ ಆಟೋ ಸ್ಟಾಂಡ್ ಬಳಿ ಅವರ ಸ್ವಗೃಹವಿದೆ. ವಿವರಕ್ಕೆ ಅಗತ್ಯ ಇದ್ದರೆ ಈ ನಂ ಇರಲಿ 9448628174
ಸಂತಾಪ
ಕೆಬಿ ರಾಮಪ್ಪ ಅವರ ನಿಧನಕ್ಕೆ ಅಪಾರ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಅವರ ನಿಧನಕ್ಕೆ ತುಂಗಾತರಂಗ ದಿನಪತ್ರಿಕೆ ಬಳಗ, ಶಿವಮೊಗ್ಗ ಟೈಮ್ಸ್ ಪತ್ರಿಕಾ ಬಳಗ, ಪ್ರೆಸ್ ಟ್ರಸ್ಟ್, ಕಾರ್ಯನಿರತ ಪತ್ರಕರ್ತರ ಸಂಘ, ರಾಜಕೀಯ, ಸಾಮಾಜಿಕ ನಾಯಕರು, ಜನಪ್ರತಿನಿಧಿಗಳು ಕಂಬನಿ ಮಿಡಿದು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ಭಗವಂತ ನೀಡಲೆಂದು ಪ್ರಾರ್ಥಿಸಿದ್ದಾರೆ.