Site icon TUNGATARANGA

ಧಾರ್ಮಿಕ ಕೇಂದ್ರಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ:ಅಶೋಕ್ ನಾಯ್ಕ

ತಾಲೂಕಿನ ಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕಟಾಪುರದಲ್ಲಿರುವ ಶ್ರೀ ತಿರುಮಲ (ಶ್ರೀ ರಂಗನಾಥ) ದೇವಾಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ಸಂಸದರ ಅನುದಾನದಡಿ 5 ಲಕ್ಷ ರೂ.ನ ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರ್ಮಿಕ ಕೇಂದ್ರಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ.

ಇಂತಹ ಕೇಂದ್ರಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ 123 ಧಾರ್ಮಿಕ ಕೇಂದ್ರಗಳ ಸಮುದಾಯ ಭವನಗಳಿಗೆ60 ಕೋಟಿ ಅನುದಾನ ನೀಡಿದ್ದಾರೆ. ಶ್ರೀ ತಿರುಮಲ ದೇವರ ಆವರಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ತಾವು ಅಗತ್ಯ ನೆರವು ನೀಡಲಿದ್ದೇವೆ ಎಂದರು.

ತುಂಗಾಭದ್ರಾ ನದಿಯ ತಟದಲ್ಲಿರುವ ವೆಂಕಟಾಪುರವು ಧಾರ್ಮಿಕ ಪ್ರವಾಸಿ ಕೇಂದ್ರವಾಗಲು ಪ್ರಶಸ್ತ್ಯವಿದೆ. ಎಂದರು ಈ ಸಂದರ್ಭದಲ್ಲಿ ಸಂಚಾಲಕ ಗಡ್ಲಬಸಪ್ಪ, ಹೆಚ್.ಆರ್.ನಂಜಪ್ಪ, ವಿ.ಹೆಚ್. ಬಸವರಾಜಪ್ಪ, ಎಂ.ಪಿ.ದಿನೇಶ್ ಪಟೇಲ್, ಕೆ.ಆರ್.ಅಜೇಯ್, ಕುಸುಮಾಕರ ಪಾಟೀಲ, ಕಾಟೀಕೆರೆ ಅಜಯ್ ಮತ್ತಿತರರು ಉಪಸ್ಥಿತರಿದ್ದರು.

Exit mobile version