Site icon TUNGATARANGA

ಶ್ರೀ ರವಿಶಂಕರ್ ಗುರೂಜಿ ಜನ್ಮದಿನದ ನಿಮಿತ್ತ ಧ್ಯಾನ ಸತ್ಸಂಗ ಸೇವಾ ಕಾರ್ಯಕ್ರಮ

ಶಿವಮೊಗ್ಗ,
ನಗರದ ಹೊರವಲಯದ ಮಂಡೇನಕೊಪ್ಪದಲ್ಲಿ ರುವ ಸುರಭಿ ಗೋ ಶಾಲೆಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಜನ್ಮದಿನದ ನಿಮಿತ್ತ ಧ್ಯಾನ, ಸತ್ಸಂಗ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೋವಿನ ಬಳಕೆಯ ಮಹತ್ವವನ್ನು ಸಂಸ್ಥೆಯ ಮಾರ್ಗದರ್ಶಕ ಶಬರೀಶ್ ಕಣ್ಣನ್ ತಿಳಿಸಿಕೊಟ್ಟರು.


ನಂತರ ಮಾತನಾಡಿದ ಅವರು, ಗೋವು ಮನುಕುಲದ ಆರಂಭದಿಂದಲೂ,ಮನುಷ್ಯರ ಪ್ರೀತಿಪಾತ್ರ ವಾದ ಪ್ರಾಣಿಯಾಗಿತ್ತು.ಆರ್ಯರು, ಭಾರತೀಯರ ನಾಗರಿಕ ಪರಂಪರೆಯಲ್ಲಿ ಗೋವಿನ ಬಳಕೆಯ ಮಹತ್ವ ಗೋಚರವಾಗುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂದಿದೆ ಎಂದು ತಿಳಿಸಿದರು.


ಗೋ ಮೂತ್ರಕ್ಕೆ ಔಷಧೀಯ ಹಾಗೂ ಕ್ರಿಮಿನಾಶಕ ಶಕ್ತಿಯಿದೆ. ಭಾರತೀಯ ವೈದ್ಯ ಪರಂಪರೆಯಾದ ಆರ್ಯುವೇದ ಪದ್ಧತಿಯಲ್ಲಿ ಗೋ ಮೂತ್ರ ಬಳಕೆ ಮಹತ್ವದ್ದಾಗಿದೆ. ಕಹಿಬೇವು ಹಾಗೂ ಸೀಗೆಯೊಂದಿಗೆ ಬೆರೆಸಿದ ಗೋ ಮೂತ್ರವು ಕೃಷಿಭೂಮಿಗೆ ಜೀವಜಲ ವಾಗಿ, ಭೂತಾಯಿಯ ಮಣ್ಣನ್ನು ಫಲವತ್ತಾಗಿ ಮಾರ್ಪಡಿ ಸುತ್ತದೆ. ಸಮೃದ್ಧತೆ ಭಾರತೀಯ ಕೃಷಿ ಪರಂಪರೆಯ ವಿಶೇಷತೆ. ದೇಶದ ಶೇಕಡ ೭೦ಕ್ಕೂ ಹೆಚ್ಚಿನ ಜನರು ಕೃಷಿಯನ್ನೇ ಜೀವನವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಅಗಾಧ ಪರಂಪರೆಯ ಮಹತ್ವದ ಮೈಲುಗಲ್ಲುಗಳಾಗಿ ಗೋಸಂತತಿ ಕೃಷಿಕರ ಒಡನಾಡಿಯಾಗಿವೆ ಎಂದು ಅವರು ಪ್ರತಿಪಾದಿಸಿದರು.


ಧ್ಯಾನ, ಸತ್ಸಂಗ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸುರಭಿ ಗೋಶಾಲೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Exit mobile version