ಶಿವಮೊಗ್ಗ, ಮೇ.30:
ಶಿವಮೊಗ್ಗ ಮಹಾನಗರಪಾಲಿಕೆಯ ಸಾಕಷ್ಟು ತಿಮಿಂಗಿಲಗಳಿಗೆ ಇಂದು ಸಂಜೆ ದೊಡ್ಡ ಶಾಕ್ ಏನು ಗೊತ್ತಾ?
ಪಾಲಿಕೆಯ ಜ್ಯೂನಿಯರ್ ಇಂಜಿನಿಯರ್ ಜಯಶೀಲ ಅವರ ಪರವಾಗಿ ಡೀಲ್ ಮಾಡಲು ಹೋಗಿದ್ದ ಅವರ ಅಸಿಸ್ಟೆಂಟ್ ಮ್ಯಾನ್ ಪವರ್ ಏಜೆನ್ಸಿಯ ವಿಜಯ್ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ವಿವರ:
ಮನೆಯೊಂದರ ಲೈಸೆನ್ಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಅದರ ರಿನೀವಲ್ ಕೇಳಿದ ಗಂಗಾಧರ್ ಎಂಬುವರಿಂದ ಹತ್ತು ಸಾವಿರ ಲಂಚ ಕೇಳಿದ್ದ ಆರೋಪ ಪಾಲಿಕೆಯ ಇಂಜಿನಿಯರ್ ಜಯಶೀಲ ಅವರ ಮೇಲಿತ್ತು.
ಈ ಹಣದ ವಿಚಾರದ ವಸೂಲಾತಿ ಅವರ ಅಸಿಸ್ಟೆಂಟ್ ಹಾಗೂ ಮ್ಯಾನ್ ಪವರ್ ಏಜೆನ್ಸಿಯ ಕಂಪ್ಯೂಟರ್ ಆಪರೇಟರ್ ವಿಜಯನದಾಗಿತ್ತು.
ಇಂದು ಸಂಜೆ ಈ ಹಣ ವಸೂಲಿಗಿಳಿದಿದ್ದಾಗ ಎಸಿಬಿ ಡಿವೈಎಸ್ ಪಿ ಲೋಕೇಶ್ ಹಾಗೂ ಇನ್ಸ್ ಸ್ಪೆಕ್ಟರ್ ವಸಂತಕುಮಾರ್ ನೇತೃತ್ವದ ತಂಡ ಆರುಸಾವಿರ ನಗದಿನೊಂದಿಗೆ ವಿಜಯನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮುಂದುವರೆದಿದೆ.