ಷರತ್ತುಗಳೊಂದಿಗೆ ಹೊಸ ಜೀವನ ಆರಂಭ, ಎಚ್ಚರವಷ್ಟೆ ನಮ್ಮದಾಗಿರಲಿ,
ಶಿವಮೊಗ್ಗ, ಜೂ.07:
ಕರಾಳ ಕೊರೊನಾ ವಿರುದ್ಧದ ಹೋರಾಟ ಮುಂದುವರಿಸುವ ಸಂಕಲ್ಪವಾಗಿ ನಾಳಿನ ಜೂನ್ 8ರ ಸೋಮವಾರದಿಂದ ದೇಶಾದ್ಯಂತ ಲಾಕ್ ಡೌನ್ ನಿಯಮವನ್ನು ಬಹುತೇಕ ಸಡಿಲಿಸಿ ಕೇಂದ್ರ ಸರ್ಕಾರ ಘೋಷಿಸಿದ ಅನ್ ಲಾಕ್ 1 ಜಾರಿಗೆ ಬರಲಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಕಡ್ಡಾಯದಂತಹ ಷರತ್ತುಗಳನ್ವಯ ದೇವಸ್ಥಾನ, ಶಾಪಿಂಗ್ ಮಾಲ್, ಹೋಟೆಲ್ ಹಾಗೂ ರೆಸ್ಟೋರೆಂಟ್ ವಹಿವಾಟು ಪುನಾರಂಭ ಗೊಳ್ಳುವುದರಿಂದ ಈ ಕ್ಷೇತ್ರಗಳನ್ನೇ ನಂಬಿಕೊಂಡಿದ್ದ ನೂರಾರು ಕುಟುಂಬಗಳಿಗೆ ಮೂರು ತಿಂಗಳ ಬಳಿಕ ಹೊಸ ಜೀವನ ಆರಂಭವಾಗಲಿದೆ.
ಲಾಕ್ ಡೌನ್ 4.0 ಮುಕ್ತಾಯದ ಬಳಿಕ ಕೈಗಾರಿಕೆಗಳ ವಹಿವಾಟು, ksrtc, ಬಿಎಂಟಿಸಿ ಆಟೋ, ಟ್ಯಾಕ್ಸಿ ರೈಲು ಸೇವೆ ಆರಂಭಿಸಲಾಗಿತ್ತು. ನಾಳೆಯಿಂದ ದೇವಸ್ಥಾನ, ಹೋಟೆಲ್, ಮಾಲ್ ಹಾಗೂ ರೆಸ್ಟೋರೆಂಟ್ ಗಳು ಬಾಗಿಲು ತೆರೆಯಲಿವೆ. ಅಂತಾರಾಷ್ಟ್ರೀಯ ವಿಮಾನಯಾನ, ಸಿನಿಮಾ ಥಿಯೇಟರ್ , ಈಜುಕೊಳ, ಜಿಮ್ ಕೇಂದ್ರ, ಶಾಲಾ ಕಾಲೇಜು ಆರಂಭಕ್ಕೆ ಇನ್ನೂ ಯಾವುದೇ ಮುಹೂರ್ತ ನಿಗದಿಯಾಗಿಲ್ಲ. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ಆತಂಕದ ನಡುವೆಯೇ ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿ ಅನ್ವಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಹೋಟೆಲ್ ಗಳಲ್ಲಿ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಪ್ರತಿ ಟೇಬಲ್ ಗಳಿಗೆ ಫೈಬರ್ ಗ್ಲಾಸ್ ಅಳವಡಿಕೆ, ಇಬ್ಬರು ಕುಳಿತುಕೊಳ್ಳಲು ಅವಕಾಶ
ಅಡುಗೆ ಸಿಬ್ಬಂದಿ ಮಾಸ್ಕ್, ಹ್ಯಾಂಡ್ ಗೌಸ್ ಹಾಗೂ ತಲೆಗೆ ಕ್ಯಾಪ್ ಧರಿಸುವುದು ಕಡ್ಡಾಯ ವಾಗಿದೆ.
ಪ್ರತಿ ಗ್ರಾಹಕ ಕುಳಿತು ಹೋದ ನಂತರ ಟೇಬಲ್ ಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಅತ್ಯಗತ್ಯ.
ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿ ನೀಡುವುದು ಕಡ್ಡಾಯ
ಹೀಗೆ ಹಲವು ನಿಬಂಧನೆಗಳೊಂದಿಗೆ ಸಡಿಲಿಕೆ ಮಾಡಲಾಗಿದ್ದು, ಜನರ ಎಚ್ಚರಿಕೆ ಅತ್ಯಗತ್ಯ.