Site icon TUNGATARANGA

ಕಾಂಗ್ರೇಸ್ ನಪುಂಸಕವಾಗಿದೆ.ಆರ್.ಎಸ್.ಎಸ್.ಹುಲಿಸಿಂಹಗಳಂತೆ : ಸಿದ್ದರಾಮಯ್ಯ ವಿರುದ್ದ ಕೆ.ಎಸ್.ಈಶ್ವರಪ್ಪ ಕಿಡಿ

ಶಿವಮೊಗ್ಗ : ವಿರೋಧ‌ ಪಕ್ಷದ‌ ನಾಯಕ ಎಂಬುದನ್ನು ಮರೆತು ಸಿದ್ದರಾಮಯ್ಯ ಅವರು ಆರ್ ಎಸ್‌ಎಸ್‌ ಅನ್ನು ನಪುಂಸಕ‌ ಸಂಘ ಎಂದು ಕರೆದಿದ್ದಾರೆ.ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಪುಂಸಕವಾಗಿದೆ. ಆರ್ ಎಸ್ ಎಸ್ ಹುಲಿ ಸಿಂಹಗಳಂತ ದೇಶ ಭಕ್ತರನ್ನು ತಯಾರಿಸುವ ಸಂಘಟನೆ. ಸಿದ್ದರಾಮಯ್ಯ ಅವರು ನನಗೆ ಮೆದುಳಿಗೆ ನಾಲಿಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ನಾನು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಕರೆದಾಗ ನನ್ನನ್ನು ಪ್ರಾಣಿ ಎನ್ನುತ್ತಾರೆ. ಸಿದ್ದರಾಮಯ್ಯ ಅವರು‌ ಮೋದಿ, ಯಡಿಯೂರಪ್ಪ ಅವರನ್ನು ಏಕ ವಚನದಲ್ಲಿ ಬೈದಿದ್ದರು‌.ಈಗ ಹೇಳಲಿ ಸಿದ್ದರಾಮಯ್ಯ ಅವರು ಯಾವಾಗ ಪ್ರಾಣಿಯಾದರು ಎಂದು ಪ್ರಶ್ನಿಸಿದರು.

ಸಿಂಹದ ಮರಿ ನರೇಂದ್ರ‌ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ್ದಾರೆ.ನಪುಂಸಕರಾದ ಕಾಂಗ್ರೆಸ್ಸಿಗರು 75 ವರ್ಷ ಅಧಿಕಾರ‌ ನಡೆಸಿದರೂ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಲಿಲ್ಲ.ಸಿದ್ದರಾಮಯ್ಯ ಅವರನ್ನು ಪ್ರಾಣಿಗೆ ಹೋಲಿಸಿದರೇ ಆ ಪ್ರಾಣಿಗೆ ಅವಮಾನ ಮಾಡಿದಂತೆ. 1925 ರ ವಿಜಯದಶಮಿ ದಿನ ಆರ್ ಎಸ್ ಎಸ್ ಹುಟ್ಟಿದ್ದು.ದೇಶದೊಳಗೆ ಬ್ರಿಟೀಷರು ಆರು ನೂರು ವರ್ಷದ ಹಿಂದೆ ಬರಲು ಆರ್ ಎಸ್ ಎಸ್ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಇದನ್ನು‌ನೋಡಿದರೆ ಸಿದ್ದರಾಮಯ್ಯ ಅವರ ತಲೆಯಲ್ಲಿ‌ ಸಗಣಿ ಬಿಟ್ಟರೆ ಏನೂ ಇಲ್ಲ ಎಂಬುದು ತಿಳಿಯುತ್ತದೆ ಎಂದು ಕಿಡಿ ಕಾರಿದರು.

Exit mobile version