ಶಿವಮೊಗ್ಗ, ಮೇ.
ಎಲ್ಲರ ಸಮಸ್ಯೆಗೂ ಸ್ಪಂದಿಸುವ ಒಂದು ಸಹಕಾರಿ ಕಚೇರಿಯಾಗಿ ನನ್ನ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ವಿಧಾನ ಪರಿಷತ್ ಡಿ.ಎಸ್. ಅರುಣ್ ಭರವಸೆ ನೀಡಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಪಂಚಾ ಯತ್ ಆವರಣದಲ್ಲಿರುವ ೧೦೦ ವರ್ಷಕ್ಕಿಂ ತಲೂ ಹಳೆಯದಾದ ಕಟ್ಟಡದಲ್ಲಿ ತಮ್ಮ ಜನ ಸಂಪರ್ಕ ಕಚೇರಿ ಉದ್ಘಾಟನೆ ನಂತರ ಸುದ್ದಿಗಾ ರರೊಂದಿಗೆ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತ ಪ್ರತಿನಿಧಿ ಗಳ ಮೂಲಕ ಆಯ್ಕೆಯಾದ ನಾನು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಂಚಾಯಿತಿ ಗಳ ಸದಸ್ಯರ ಅಹವಾಲುಗಳನ್ನು ಆಲಿಸಿ ಅವರಿಗೆ ಸ್ಪಂದಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಜಿಟಲೈಸ್ಡ್ ಕಚೇರಿಯನ್ನಾಗಿ ಮಾಡಿದ್ದೇನೆ ಎಂದರು .
ಇಂದು ವಿದ್ಯುಕ್ತವಾಗಿ ಪಕ್ಷದ ನಾಯಕರು ಉದ್ಘಾಟಿಸಿದ್ದಾರೆ. ಈ ಸಂಪರ್ಕ ಕೇಂದ್ರ ಪ್ರತಿಯೊಬ್ಬರಿಗೂ ಹತ್ತಿರವಾಗಲಿದೆ. ಸಮಸ್ಯೆಗಳಿಗೆ ಸ್ಪಂದಿಸುವ ಕಚೇರಿಯಾಗಲಿದೆ. ನಾನಂತೂ ಒಬ್ಬ ರಾಜಕಾರಣಿಯಾಗಿ ೨೪ ಗಂಟೆ ದೂರವಾಣಿಯನ್ನು ಬಂದ್ ಮಾಡದೇ ಸೇವೆ ನೀಡಲು ಸಿದ್ಧವಾಗಿದ್ದೇನೆ ಎಂದರು.
ಸೊರಬ ಆನವಟ್ಟಿಯಿಂದ ಹೊನ್ನಾಳಿ ಕ್ಷೇತ್ರದವರೆಗೆ ನನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಂಚಾಯಿತಿ ಸದಸ್ಯರಿಗೆ ನನ್ನ ಕಚೇರಿ ಯಾವಾಗಲೂ ಸೇವೆ ನೀಡಲು ಸಿದ್ಧವಾಗಿದೆ ಎಂದರು.
ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಕೆ.ಬಿ. ಅಶೋಕ್ ನಾಯ್ಕ್, ಆರ್.ಎಸ್.ಎಸ್. ಮುಖಂಡ ಪಟ್ಟಾಭಿರಾಂ, ಪದ್ಮನಾಭ್ ಭಟ್, ಮೇಯರ್ ಸುನಿತಾ ಅಣ್ಣಪ್ಪ ಹಾಗೂ ಪಕ್ಷದ ಹಿರಿಯ ಮುಖಂಡರು ಮತ್ತಿತರರಿದ್ದರು.