Site icon TUNGATARANGA

ರಂಗಶಿಕ್ಷಣ ಡಿಪ್ಲೊಮಾಗೆ ಅರ್ಜಿ ಆಹ್ವಾನ

 ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಸ್ಥಾಪಿಸಿರುವ ಭಾರತೀಯ ರಂಗವಿದ್ಯಾಲಯ ಸಂಸ್ಥೆಯು ಪ್ರತಿ ವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮಾ ಕೋರ್ಸನ್ನು ನಡೆಸುತ್ತಿದ್ದು ಪ್ರಸ್ತುತ 2022-23 ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


     ಅಭ್ಯರ್ಥಿಯು ಕನಿಷ್ಟ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷ ತುಂಬಿದ ಮತ್ತು 28 ವರ್ಷಗಳು ತುಂಬಿರಬಾರದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮತ್ತು ಮಾಹೆಯಾನ ರೂ.3000/- ಗಳ ವಿದ್ಯಾರ್ಥಿ ವೇತನ ಹಾಗೂ ರೂ.2000/- ಗಳ ಊಟೋಪಚಾರ ಭತ್ಯೆ ಪಾವತಿಸಲಾಗುವುದು.


     ರಂಗಾಯಣದ ವೆಬ್‍ಸೈಟ್ www.rangayana.org ನಲ್ಲಿ ಅರ್ಜಿ ಡೌನ್‍ಲೋಡ್ ಮಾಡಿಕೊಂಡು ಅಥವಾ ರಂಗಾಯಣ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ ರೂ.200/-, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.150 ಗಳ ಡಿ.ಡಿ ಯನ್ನು ಉಪ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು-570005 ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜೂನ್ 17 ರೊಳಗೆ ತಲುಪುವಂತೆ ಅಂಚೆಯ ಮೂಲಕ ಅಥವಾ ಖುದ್ದಾಗಿ ಕಳುಹಿಸಬಹುದು. ಸಂದರ್ಶನ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರಮುಖೇನ ತಿಳಿಸಲಾಗುವುದು.


     ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ : 0821-2512639, 9448938661 ನ್ನು ಸಂಪರ್ಕಿಸಬಹುದು. ರಂಗವಿದ್ಯಾಲಯದ ಸಂಪೂರ್ಣ ಮಾಹಿತಿಗೆ ‘ಬಣ್ಣದ ಬದುಕಿನ ಬಾಗಿಲು’ ಸಾಕ್ಷ್ಯಚಿತ್ರವನ್ನು ವೆಬ್‍ಸೈಟ್ www.rangayana.org ವೀಕ್ಷಿಸಬಹುದು ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

Exit mobile version