Site icon TUNGATARANGA

ಶಿವಮೊಗ್ಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ಪುತ್ರನ ಮದುವೆ ನಿಶ್ಚಿತಾರ್ಥ

ಶಿವಮೊಗ್ಗ : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥವು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಸಹೋದರ ಬಿ.ಕೆ. ಶಿವಕುಮಾರ್ ಪುತ್ರಿಯೊಂದಿಗೆ ನಡೆಯಿತು.
ನವುಲೆಯ ಸರ್ಜಿ ಕನ್ವೆಷನಲ್ ಹಾಲ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಶಿವಕುಮಾರ್ ಪುತ್ರಿ ಹಿತಾ ಅವರ ಎಂಗೇಜ್ ಮೆಂಟ್ ಇಂದು ನಡೆಯಿತು.
ಗಣಪತಿ ಮತ್ತು ಉಮಾಮಹೇಶ್ವರ ಕಳಶಪೂಜೆ, ಮಡ್ಲಕ್ಕಿ ಶಾಸ್ತ್ರ ಮೊದಲಾದ ಶಾಸ್ತ್ರೋಕ್ತವಾಗಿ ನಡೆದು ಮಧ್ಯಾಹ್ನ ೧ ಗಂಟೆಯ ವೇಳೆಗೆ ಉಂಗುರ ಬದಲಾವಣೆ ಶಾಸ್ತ್ರ ನಡೆಯಿತು.
ಇದರಿಂದ ಇಬ್ಬರು  ರಾಜಕೀಯ ಕುಟುಂಬದ ನಡುವೆ ಬಾಂಧವ್ಯ ಆರಂಭಗೊಂಡಂತಾಗಿದೆ. ಈ ಸಮಾರಂಭದಲ್ಲಿ ಸಚಿವ ಈಶ್ವರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಕೆ.ಬಿಪ್ರಸನ್ನ ಕುಮಾರ್ ಮೊದಲಾದ ಗಣ್ಯವ್ಯಕ್ತಿಗಳು ಜೋಡಿಗಳನ್ನ ಹರಿಸಿದ್ದಾರೆ.
ಇದೇವೇಳೆ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಜರಾದ ಗಣ್ಯರಿಗೆ ಪೇಟ, ಶಾಲು ಹೊದಿಸಿ ಸನ್ಮಾನಿಸಿದರು. ಕೋವಿಡ್-೧೯ ಹಿನ್ನಲೆಯಲ್ಲಿ ಭೋಜನದ ಹಾಲಿನಲ್ಲಿ ಒಂದು ಟೇಬಲ್ ನಲ್ಲಿ ಇಬ್ಬರು ಆಸನ ಮಾಡಿ ಊಟ ಮಾಡುವ ವ್ಯವಸ್ಥೆ ಸಹ ಮಾಡಲಾಗಿತ್ತು. ಪ್ರತಿ ಟೇಬಲ್ ನಡುವೆಯೂ ಅಂತರ ಕಾಪಾಡಿಕೊಂಡು ವ್ಯವಸ್ಥೆ ಮಾಡಿರುವುದು ವಿಶೇಷವಾಗಿತ್ತು. ಎಲ್ಲೂ ಯಾವ ಗುಂಪು ಸೇರಲು ಅವಕಾಶಗಳಿಲ್ಲದಂತೆ ನೋಡಿಕೊಳ್ಳಲಾಗಿತ್ತು.

Exit mobile version