Site icon TUNGATARANGA

ಇಂದು ಶಿವಮೊಗ್ಗ ನಗರ ಹಾಗೂ ಗ್ರಾಮೀಣ ಭಾಗದ ಎಲ್ಲೆಲ್ಲಿ ಕರೆಂಟ್ ಕಟ್ ಗೊತ್ತಾ?

ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಶಿವಮೊಗ್ಗ ಮೇ 25:
ಮೇ 25 ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಶಿವಮೊಗ್ಗ ಎಂ.ಆರ್.ಎಸ್. 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎಫ್-8 ಫೀಡರ್‍ನಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ ಹೊಳೆಬೆನವಳ್ಳಿ, ಡೊಡ್ಡ ತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸಳಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

  ಮೇ 25 ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಎಂ.ಆರ್.ಎಸ್. ಶಿವಮೊಗ್ಗದಲ್ಲಿ ತುರ್ತಾಗಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ನಗರ ವ್ಯಾಪ್ತಿಯ ನೆಹರೂ ಕ್ರೀಡಾಂಗಣ ಸಮೀಪ, ಜಯನಗರ, ದುರ್ಗಿಗುಡಿ, ಬಿ.ಹೆಚ್.ರಸ್ತೆ, ತಿಲಕ್‍ನಗರ, ಪಾರ್ಕ್ ಬಡಾವಣೆ, ಶಂಕರಮಠ ರಸ್ತೆ, ವಿದ್ಯಾನಗರ, ಗುಂಡಪ್ಪ ಶೆಡ್, ಶೇಷಾದ್ರಿಪುರಂ, ಪುರಲೆ, ಗುರುಪುರ, ಗಣಪತಿ ಲೇಔಟ್, ಚಿಕ್ಕಲ್, ವೆಂಕಟೇಶ್ವರನಗರ, ಮಂಜುನಾಥ ಬಡಾವಣೆ, ರಾಜೀವ್‍ಗಾಂಧಿ ಬಡಾವಣೆ, ನಂಜಪ್ಪ ಬಡಾವಣೆ, ಪ್ರಿಯಾಂಕ ಬಡಾವಣೆ, ವಡ್ಡಿನಕೊಪ್ಪ, ಮಲವಗೊಪ್ಪ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೇ 25 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಎಂ.ಆರ್.ಎಸ್. ಶಿವಮೊಗ್ಗದಲ್ಲಿ ತುರ್ತಾಗಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ನಗರ ವ್ಯಾಪ್ತಿಯ ಬೆಕ್ಕಿನ ಕಲ್ಮಠ, ಕೋಟೆರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ.ರಸ್ತೆ, ಒ.ಬಿ.ಎಲ್.ರಸ್ತೆ, ಪೆನ್ಷನ್ ಮೊಹಲ್ಲಾ, ಸಿ.ಎಲ್.ಆರ್ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಎಲಕಪ್ಪನಕೇರಿ, ನಾಗಪ್ಪನಕೇರಿ, ಗಾಂಧಿ ಬಜಾರ್, ಬಿ.ಹೆಚ್.ರಸ್ತೆ ಎಡಭಾಗ, ಅಮೀರ್ ಅಹಮ್ಮದ್ ಸರ್ಕಲ್, ಶಿವಾಜಿರಸ್ತೆ, ತಿರುಪಳ್ಳಯ್ಯನ ಕೇರಿ, ಸಾವರ್ಕರ್ ನಗರ, ಅಶೋಕ ರಸ್ತೆ, ಕುಚಲಕ್ಕಿ ಕೇರಿ, ಎಂ.ಕೆ.ಕೆ.ರಸ್ತೆ, ಅನವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾಪರಮೇಶ್ವರಿ ದೇವಸ್ಥಾನ ರಸ್ತೆ, ಧರ್ಮರಾಯನ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ವಿನಂತಿಸಿದೆ.

ನಾಳೆ ಮೆಸ್ಕಾಂ ಜನಸಂಪರ್ಕ ಸಭೆ

ಶಿವಮೊಗ್ಗ ಮೇ 24:
ಕುಂಸಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಹಾಗೂ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಮೇ 26 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮೆಸ್ಕಾಂ ವತಿಯಿಂದ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ಕುಂಸಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಇವರ ಕಚೇರಿ, ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗ, ಕುಂಸಿ ಇಲ್ಲಿ ಆಯೋಜಿಸಿರುವ ಸಭೆಯಲ್ಲಿ ಪಾಲ್ಗೊಂಡು ತಮ್ಮ ಕುಂದು ಕೊರತೆ ನಿವಾರಿಸಿಕೊಳ್ಳಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ದೂ.ಸಂ.: 9480841340 ನ್ನು ಸಂಪರ್ಕಿಸುವುದು.

Exit mobile version