Site icon TUNGATARANGA

ಜನರ ಕಣ್ಣೋಟವೇ ಇಲ್ಲಿ ಚಿತ್ರೀಕರಣ, ಶಿವಮೊಗ್ಗ ತುಂಗಾ ಸೇತುವೆ ಕೆಳಗೆ ನಡೆದದ್ದೇನು…?

ಶಿವಮೊಗ್ಗ, ಮೇ. 24:
ಸೋಮವಾರ ಸಂಜೆ ಬೆಳಕು ಮುಗಿದು ಕತ್ತಲು ಆವರಿಸುವ ಹೊತ್ತು. ನಗರದಲ್ಲಿ ಬೀದಿ ದೀಪಗಳು ಉರಿಯಲಾರಂಭಿಸಿವೆ. ದಾರಾಕಾರ ನೀರು ಹರಿದು ಬರುತ್ತಿರುವ ತುಂಗಾ ಸೇತುವೆ ಬಳಿ ನೈಜ ಚಿತ್ರಣದ ಶೂಟಿಂಗ್ ನಡೆಯುತ್ತಿತ್ತು.
ಇದೇನು ಯಾವುದೇ ಸಿನಮಾದ ಚಿತ್ರೀಕರಣವಲ್ಲ.

ಇಲ್ಲಿ ಕ್ಯಾಮರಾಗಳಿರಲಿಲ್ಲ. ಓನ್ಲಿ ಸೇತುವೆ ಕೆಳಗಿನ ಕಳ್ಳ ಪೊಲೀಸರ ರನ್ನಿಂಗ್ ರೇಸ್ ನೋಡಲು ಸೇತುವೆಯಿಂದಲೇ ಜನ ಯತ್ನಿಸುತ್ತಾ ಕಂಗಳಿಂದಲೇ ಶೂಟಿಂಗ್ ಮಾಡಿಕೊಂಡ ಘಟನೆ ಈಗಿನ ಬಿಸಿಬಿಸಿ ಸ್ಡೋರಿ.
ಸರ ಕಳ್ಳರಿಗಾಗಿ ತುಂಗನದಿಯ ಸೇತುವೆ ಸಮೀಪ ಕೋಟೆ ಪೊಲೀಸರ ಹುಡುಕಾಟ ನಡೆದಿದೆ. ಇದರಿಂದಾಗಿ ತುಂಗಾ ನದಿ ಸೇತುವೆಯ ಮೇಲೆ ಭರ್ಜರಿ ಜನ ಜಮಾವಣೆಗೊಂಡಿದ್ದಾರೆ.


ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣದ ಬಳಿ ತುಂಗಾ ನದಿಯ ಸೇತುವೆ ಹಾಗೂ ರೈಲ್ವೇ ಸೇತುವೆಯ ಕೆಳಭಾಗದಲ್ಲಿ ಪೊಲೀಸರ ಹುಡುಕಾಟ ಆರಂಭವಾಗಿದೆ. ಹತ್ತಕ್ಕೂ ಹೆಚ್ಚು ಪೊಲೀಸ್ ಮೊಬೈಲ್ ಬ್ಯಾಟರಿ ಬೆಳಕಲ್ಲೆ ಕಳ್ಳರನ್ನು ಹಿಡಿಯುತ್ತಿದ್ದರು.
ಮಹಿಳೆಯ ಸರ ಕಳ್ಳತನ ಮಾಡಿ, ಪರಾರಿಯಾದ ಕಳ್ಳನಿಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ. ಸರಗಳ್ಳರು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರ ಕಾರ್ಯಾಚರಣೆ ನೋಡಲು ಜನ ಮುಗಿಬಿದ್ದಿದ್ದಾರೆ.
ಶಿವಮೊಗ್ಗದ ತುಂಗಾ ಸೇತುವೆ ಮೇಲೆ ನಿಂತು ಜನ ಪೊಲೀಸರು ಹಾಗೂ ಸರಗಳ್ಳರ ಕಾರ್ಯಾಚರಣೆ ವೀಕ್ಷಿಸುತ್ತಿದ್ದಾರೆ. ಹೆಚ್ಚಿನ ಜನ, ವಾಹನ ಸೇತುವೆ ಮೇಲೆ ನಿಂತಿದ್ದರಿಂದ ಕೆಲಕಾಲ ಟ್ರಾಫಿಕ್ ಸಹ ಜಾಮ್ ಆಗಿತ್ತು. ಜನಕ್ಕೆ ಹೇಳುವ ಭಾಷೆಯಲ್ಲಿ ಮತ್ತೆ ಇದೇ ಪೊಲೀಸರು ಹೇಳಿ ಮನೆಗೆ ಕಳಿಸಿದ್ದಾರೆ. ಈ ಕಳ್ಳರ ಬೈಕ್ ಸಿಕ್ಕಿದೆ ಎನ್ನಲಾಗಿದೆ. ಮಿಕ್ಕ ಮಾಹಿತಿ ಅಲಭ್ಯ.

Exit mobile version