Site icon TUNGATARANGA

ಚಾರಣದಿಂದ ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ: ಎಸ್.ಕೆ.ಶೇಷಾಚಲ

ಶಿವಮೊಗ್ಗ,
ಹಿಮಾಲಯದ ಪುಣ್ಯ ಭೂಮಿ ಯನ್ನು ಸ್ವರ್ಷಿಸಿ, ಚಾರಣ ಮಾಡುವ ಅವಕಾಶ ಸಿಗುವುದು ಎಲ್ಲರ ಅದೃಷ್ಟ. ಹಿಮಾಲಯಕ್ಕೆ ಚಾರಣ ಹೋರಟ ತಾವೆಲ್ಲರೂ ಪುಣ್ಯ ವಂತರು ಎಂದು ವಾಸವಿ ಟ್ರಸ್ಟ್‌ನ ಶೇಷಾಚಲ ಹೇಳಿದರು.


ಶಿವಮೊಗ್ಗ ನಗರ ದಿಂದ ಹಿಮಾಲಯ ಚಾರಣಕ್ಕೆ ಹೊರಟ ತರುಣೋದಯ ಘಟಕದ ಐವತ್ತೈದು ಸದಸ್ಯರಿಗೆ ಬೀಳ್ಕೊಟ್ಟು ಮಾತನಾಡಿದರು. ದೇವ ಭೂಮಿಯಲ್ಲಿ ಪ್ರತಿಯೊಬ್ಬರಿಗೂ ಅಗೋ ಚರವಾಗಿ ಕಾಣುವ ದೇವರು ಅವರ ಕಲ್ಪನೆಗೆ ಬಿಟ್ಟ ವಿಚಾರ. ಬಿಳಿ ಬೆಟ್ಟಗಳು, ಪ್ರಾಕೃತಿಕ ಸೊಬಗನ್ನು ನೋಡುವಾಗಅನೇಕ ಭಾವನೆಗಳು ಗೋಚರಿಸುತ್ತವೆ ಎಂದುತಿಳಿಸಿ ದರು.ದಿನ ನಿತ್ಯದ ಜಂಜಾಟದಿಂದ ಹಾಗೂ ಅನುಕೂಲಕರ ವಾತಾ ವರಣದಿಂದ, ಯಾರಿಗೂ ಹೋಗಲು ಆಗದ ಕಾಡಿನ ಜಾಗಕ್ಕೆ ಚಾರಣಿಗ ಹೋಗಿ ಪ್ರಕೃತಿಯ ಸೌಂದರ್ಯ ಸವಿಯಲುಸಾಧ್ಯ ಎಂದರು.


ಛೇರ್ಮನ್ ವಾಗೇಶ್ ಗುಲಾಬಿ ಹೂವನ್ನು ನೀಡಿ ಶುs ಕೋರಿದರು. ಯೂಥ್ ಹಾಸ್ಟೆಲ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷಜಿ.ವಿಜಯಕುಮಾರ್ ಮಾತನಾಡಿ, ಪ್ರಕೃತಿ ಅಧ್ಯಯನಕ್ಕೆ ಹಿಮಾಲಯ ಉತ್ತಮ ಪ್ರದೇಶ ವಾಗಿದ್ದು, ಚಾರಣ ಮಾಡುವುದರಿಂದ ಪ್ರಾಕೃತಿಕ ಸೊಬಗಿನ ಪರಿಚಯ ಆಗುತ್ತದೆ. ಹಿಮಾಲಯ ಪ್ರದೇಶಗಳಲ್ಲಿನ ಜನರ ಜೀವನಶೈಲಿ ಹಾಗೂ ಸಾಂಸ್ಕೃತಿಕ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.


ಸಂದರ್ಭಗಳಲ್ಲಿ ಬಹಳ ಜಾಗೃತಿ ವಹಿಸಬೇಕು. ಸುಂದರವಾದ ಹಿಮಾಲಯದಲ್ಲಿಚಾರಣ ಮಾಡುವಾU ವಿವಿಧ ಹವಾ ಗುಣವನ್ನುಒಂದೇ ದಿನ ದಲ್ಲಿಅನುಭವಿ ಸಬಹುದಾಗಿದೆಎಂದು ತಿಳಿಸಿದರು.
ಅಮಿತ, ಧನಂಜಯ, ಪ್ರಭಾವತಿ, ಸುರೇಂದ್ರನ್, ಸುರೇಶ್, ಶೆಣೈ, ಮಂಜುನಾಥ್, ಪ್ರಕೃತಿ, ಸಹನ, ಶರತ್,ರಮೇಶ್ ಹೆಗ್ಡೆ ಮುಂತಾದವರುಇದ್ದರು.

Exit mobile version