Site icon TUNGATARANGA

ಗ್ಯಾಸ್ ಸಿಲಿಂಡರ್ ಮೇಲೆ 200 ರೂ ಸಬ್ಸಿಡಿ ಲಭ್ಯ, ಷರತ್ತು ಅನ್ವಯ

ನವದೆಹಲಿ, ಮೇ.:
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಚ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಕೇಂದ್ರ ಸರ್ಕಾರ ಇದರ ನಡುವೆಯೇ ಗ್ಯಾಸ್ ಸಿಲಿಂಡರ್ ಮೇಲೆ ಕೂಡ ಘೋಷಣೆ ಮಾಡಿದೆ.


ಶನಿವಾರ ಗ್ಯಾಸ್ ಸಿಲಿಂಡರ್ ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶನಿವಾರ ಮಹತ್ವದ ಘೋಷಣೆಗಳನ್ನು ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿ ದ್ದರೆ, ಗ್ಯಾಸ್ ಸಿಲಿಂಡರ್‌ಗಳ ಮೇಲೆ ರೂ ೨೦೦ ಸಬ್ಸಿಡಿಯನ್ನು ಸಹ ಘೋಷಿಸಿದೆ.


ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ; ಪೆಟ್ರೋಲ್ ಬೆಲೆ ೯.೫ ರೂ, ಡೀಸೆಲ್ ದರ ೭ ರೂ. ಇಳಿಕೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ೯ ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಈ ಸಬ್ಸಿಡಿ ಲಭ್ಯವಾಗಲಿದ್ದು, ಆದರೆ ಈ ಸಬ್ಸಿಡಿ ವಿಚಾರಕ್ಕೆ ಷರತ್ತು ಕೂಡ ಹಾಕಲಾಗಿದೆ. ಈ ಸಬ್ಸಿಡಿಯನ್ನು ವಾರ್ಷಿಕವಾಗಿ12 ಸಿಲಿಂಡರ್‌ಗಳಿಗೆ ಮಾತ್ರ ನೀಡಲಾಗುವುದು ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ’ಪ್ರಧಾನಿ ಉಜ್ವಲ ಯೋಜನೆಯ ೯ ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಈ ವರ್ಷ ಪ್ರತಿ ಗ್ಯಾಸ್ ಸಿಲಿಂಡರ್‌ಗೆ (೧೨ ಸಿಲಿಂಡರ್‌ಗಳವರೆಗೆ) ೨೦೦ ರೂಪಾಯಿ ಸಬ್ಸಿಡಿ ನೀಡಲಿದ್ದಾರೆ. ಇದು ನಮ್ಮ ತಾಯಿ ಮತ್ತು ಸಹೋದರಿಯರಿಗೆ ಸಹಾಯ ಮಾಡುತ್ತದೆ. ಇದು ಸುಮಾರು ೬೧೦೦ ಕೋಟಿ ವಾರ್ಷಿಕ ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

Exit mobile version