Site icon TUNGATARANGA

ಚುಂಚಾದ್ರಿ ಮಹಿಳಾ ವಿವಿದೊದ್ದೇಶ ಸೌಹಾರ್ದ ಸಹಕಾರಿಯಿಂದ ವಿನೂತನ ಸ್ವಾತಂತ್ರ್ಯ ದಿನಾಚರಣೆ

ಶಿವಮೊಗ್ಗ,ಆ.17:

ಇಲ್ಗಿನ ಗಾರ್ಡನ್ ಏರಿಯಾ ಮೂರನೇ ತಿರುವಿನಲ್ಲಿರುವ ಚುಂಚಾದ್ರಿ ಮಹಿಳಾ ವಿವಿದೊದ್ದೇಶ ಸೌಹಾರ್ದ ಸಹಕಾರಿಯು ಪ್ರಸಕ್ತ ಸ್ವಾತಂತ್ರೋತ್ಸವ ಸಂಭ್ರಮವನ್ನು ವಿಶೇಷವಾಗಿ ಆಚರಿಸಿತು. ಕಳೆದ 18 ವರ್ಷದಿಂದ ಜಮ್ಮುವಿನಲ್ಲಿ ದೇಶದ ಸೈನಿಕರಾಗಿ ಸೇವೆಸಲ್ಲಿಸುತ್ತಿರುವ ಚಂದ್ರಶೇಖರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸೈನಿಕರಾದ ಚಂದ್ರಶೇಖರ್ ಅವರಿಗೆ ಗೌರವ ಸಲ್ಲಿಸಿದ ಸಹಕಾರ ಸಂಸ್ಥೆ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆದಿಚುಂಚನಗಿರಿ ಕಾಲೇಜಿನ ವಿದ್ಯಾರ್ಥಿನಿ ನಂದಿತ ಅವರನ್ನು ಸಹ ಗೌರವಿಸಿತು.


ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪರಿಸರ ರಕ್ಷಿಸುವ ಹಿನ್ನೆಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಗಾಡಿಕೊಪ್ಪದ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಔಷಧೀಯ ಗಿಡಗಳಾದ ಹೊನ್ನೆ, ಬೇವು, ಹಿಪ್ಪಲಿ, ಅಂಟುವಾಳ, ಬನ್ನಿ, ಬೆಟ್ಟದ ನೆಲ್ಲಿ ಮೊದಲಾದ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಸಹಕಾರಿ ಅಧ್ಯಕ್ಷರಾದ ಶಾರದಾ ಶೇಷಗಿರಿ ಗೌಡ, ನಿರ್ದೇಶಕರಾದ ಹೇಮಾ ನಾಗರತ್ನ, ಸುಜಾತ, ಉದಯಕುಮಾರಿ, ಕಾರ್ಯದರ್ಶಿ ಅನಿತಾ ,ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version