Site icon TUNGATARANGA

ಸಂಸ್ಕೃತಿಯ ಮೆರಗನ್ನು ಬೆಳೆಸಿ, ಜೀವನ ಧರ್ಮ ಬೋಧಿಸಿದ್ದು ಜೈನ ಧರ್ಮ : ಬಿ.ವೈ. ರಾಘವೇಂದ್ರ

ಸಾಗರ,ಮೇ.22:
ಮಲೆನಾಡಿನ ಹಲವು ಭಾಗದಲ್ಲಿ ಜೈನ ಬಸದಿ, ಜೈನ ಕೇಂದ್ರಗಳು ಐತಿಹಾಸಿಕವಾಗಿವೆ, ಸಂಸ್ಕೃತಿಯ ಮೆರಗನ್ನು ಬೆಳೆಸಿದ ಜೀವನ ಧರ್ಮ ಬೋಧಿಸಿದ್ದು ಜೈನ ಧರ್ಮ, ಹಲವು ವರ್ಷಗಳಿ೦ದ ಸಮಾಜಮುಖಿ ಕೆಲಸ ಮಾಡುತ್ತಾ, ಗೋಸೇವೆ, ಆರ್ಥಿಕ ಸಹಾಯಗಳನ್ನು ಮಾಡುತ್ತಾ ಜಿಲ್ಲೆಯ ಜನರ ಆಶಾಕಿರಣವಾಗಿ ಜೈನ ಸಮುದಾಯ ಕಾರ್ಯ ನಿರ್ವಹಿಸುತ್ತಿದೆ, ತನ್ನ ಕ್ರಿಯಾಶಕ್ತಿ ಹಾಗೂ ತಪಸ್ಸುಗಳಿ೦ದ ಶಿವಮೊಗ್ಗ ಜಿಲ್ಲೆಯ ಜನರ ಗಮನ ಸೆಳೆದಿದೆ, 5 ದಿನದಿಂದ ಸಾಗರದಲ್ಲಿ ಈ ಪುಣ್ಯದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.

ಸಾಗರದ ಪಟ್ಟಣದ ನೆಹರು ಮೈದಾನದಲ್ಲಿ ಭಗವಾನ್ 1008 ಶ್ರೀ ಆದಿನಾಥ ತೀರ್ಥಂಕರರ ಹಾಗೂ ಮಾನಸ್ಥಂಭೋಪನಿ ಚತುರ್ಮುಖ ಜಿನಬಿಂಬ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭಾಗವಹಿಸಿ ಶ್ರೀಗಳ ಆಶೀರ್ವಾದವನ್ನು ಪಡೆದರು.
ದಿವ್ಯ ಸಾನಿಧ್ಯವನ್ನು ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜ್, ಹೊಂಬುಜ ಕ್ಷೇತ್ರದ ಶ್ರೀಗಳಾದ ಡಾ| ದೇವೇಂದ್ರ ಕೀರ್ತಿ ಭಟ್ಟಾಚಾರ್ಯವರ್ಯ ಸ್ವಾಮಿಗಳು, ಎಸ್. ಆರ್ ನಾಗರಾಜ್, ರಾಜೇಂದ್ರ ಬಿಳಕಿ ಪ್ರಸನ್ನ ಕೆರೆಕೈ, ಜೈನ ಸಮಾಜದ ಬಂಧುಗಳು ಹಾಗೂ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು.

Exit mobile version