Site icon TUNGATARANGA

Great Issue/ ತುಂಗಾತರಂಗ ಕಳಕಳಿ ಹಾಗೂ ಯುವಕರ ಸಮಯಪ್ರಜ್ಞೆ : ಅಗ್ನಿಶಾಮಕ ದಳದಿಂದ 13 ಕುದುರೆಗಳ‌ ರಕ್ಷಣೆ..,

ಸೂಡಾ ಕಳಪೆ ಕಾಮಗಾರಿ, ಒಡೆದ ಸೋಮಿನಕೊಪ್ಪ ಕೆರೆಗೆ ನೀರು ಬರುವಕೋಡಿ, ಸಾವಿನಂಚಿಗೆ ತಲುಪಿದ ಕುದುರೆಗಳು ! https://tungataranga.com/?p=11179 ಅವತ್ತೇ ತುಂಗಾತರಂಗ ಬರೆದಿದ್ದ ವರದಿ ಇದು

ಶಿವಮೊಗ್ಗ,ಮೇ.20:
ಇಲ್ಲಿನ ವಾರ್ಡ್ ನಂ. 01 ಸೋಮಿನಕೊಪ್ಪ ಭೋವಿ ಕಾಲೋನಿಯ ಯುವಕರ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕದಳದ ಸಮಯ ಪ್ರಜ್ಞೆ ಕೆರೆಯ ಮದ್ಯ ಭಾಗದಲ್ಲಿ 2 ದಿನಗಳಿಂದ ಸಿಕ್ಕಿ ಹಾಕಿಕೊಂಡಿದ್ದ 13 ಕುದುರೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಘಟನೆಯ ವಿವರ :
13 ಕುದುರೆಗಳ ಗುಂಪು ತನ್ನ ಆಹಾರವನ್ನು ಹುಡುಕುತ್ತಾ ಕೆರೆಯ ಮಧ್ಯಭಾಗಕ್ಕೆ ತೆರಳಿದ್ದವು. ಈ ಸಮಯ ಮಾನ್ಸೂನ್ ಮಾರುತದಿಂದ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕೋಟೆಗಂಗೂರು ಕೆರೆ ತುಂಬಿ ಸೋಮಿನಕೊಪ್ಪ ಕೆರೆಗೆ ನೀರು ಹರಿದು ಬಂದ ಪರಿಣಾಮ ಕೆರೆ ತುಂಬಿ‌ ಕೊಡಿ ಬಿದಿತ್ತು. ಏನೂ ಅರಿಯದ ಮೂಕ ಪ್ರಾಣಿಗಳು ಸುತ್ತಲು ನೀರನ್ನು ನೋಡಿ ಭಯಭೀತರಾಗಿ ಕೆರೆಯ ಮಧ್ಯಭಾಗದ ದಿಣ್ಣೆಯ ಮೆಲೆ ನಿಂತಿದ್ದವು.
ಇದೇ ಸಂದರ್ಭ ಕೋಡಿ ಬಿದ್ದ ಕೆರೆಯನ್ನು ನೋಡಲು ಹೋದ ಯುವಕರು ಈ ಕುದುರೆಗಳನ್ನು ನೋಡಿದ್ದಾರೆ.

ತಕ್ಷಣವೇ ಶಿವಮೊಗ್ಗದಲ್ಲಿ ಸಾಮಾಜಿಕ ಹಾಗೂ ಮಾನವೀಯ ಕಳಕಳಿಯ ತುಂಗಾ ತರಂಗ ಪತ್ರಿಕಾಲಯಕ್ಕೆ ತಿಳಿಸಿದ್ದಾರೆ.
ಈ ಸಂದರ್ಭ ವಿನೋಬನಗರ ಠಾಣೆಯ ಪಿ ಐ ರವಿ ಅವರಿಗೆ ಮಾಹಿತಿ ನೀಡಿದರು. ಮಳೆ‌‌ ಅವಘಡಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ‌ ಕಂಟ್ರೋಲ್ ರೂಂ ಗೆ ಕೆರೆ ಮಾಡಲು ನಂಬರ್ ನೀಡಿದರು.
ತುಂಗಾ ತರಂಗ ಪತ್ರಿಕಾ ವರದಿಗಾರ ಜಿಲ್ಲಾಧಿಕಾರಿ ಕಛೇರಿಗೆ ತಕ್ಷಣ ಫೋನಾಯಿಸಿ ದೂರು ನೀಡಿದರು.
ತಕ್ಷಣಕ್ಕೆ ಕೆರೆಗೆ ಆಗಮಿಸಿದ ಅಗ್ನಿಶಾಮಕ ದಳ ಬೋಟ್ ಮೂಲಕ ತೆರಳಿ‌ ಕುದುರೆಗಳ ಜೀವ ಉಳಿಸಿದ್ದಾರೆ. ಈ‌ ಕಾರ್ಯಕ್ಕೆ ಇಲ್ಲಿನ ಯುವ ಜನತೆ ಶ್ಲಾಘಿಸಿದ್ದಾರೆ.
ಕಾರ್ಯಚರಣೆಯಲ್ಲಿ ಡಿಎಫ್’ಒ ಅಶೋಕ್ ಕುಮಾರ್, ಎಫ್’ಎಸ್’ಒ ಪ್ರವೀಣ್, ಸಿಬ್ಬಂದಿಗಳಾದ ದೇವೇಂದ್ರ ನಾಯ್ಕ, ಕುಮಾರಸ್ವಾಮಿ, ಹರೀಶ್, ವೆಂಕಟೇಶ್ ಹಾಗೂ ವಿಜಯ್ ಕರೋಶಿ ಪಾಲ್ಗೊಂಡು ಕುದುರೆಗಳ ಜೀವ ಉಳಿಸಿದ್ದಾರೆ.

Exit mobile version