Site icon TUNGATARANGA

ಶಿವಮೊಗ್ಗ/ ಶಾಸಕರು, ಮೇಯರ್ ಹಾಗೂ ಎಂಡಿಗೆ ಜನರೇ ಮಾರಿಹಬ್ಬ ಮಾಡ್ತಿದ್ರು.. ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಆಕ್ರೋಶ

ಶಿವಮೊಗ್ಗ, ಮೇ.20:
ಶಿವಮೊಗ್ಗ ನಗರದ ಮಳೆ ವಿಚಾರವಾಗಿ ಸ್ಪಂದಿಸದ ಶಾಸಕರು, ಮೇಯರ್ ಹಾಗೂ ಸ್ಮಾರ್ಟ್ ಸಿಟಿ ಎಂ.ಡಿ. ವಿರುದ್ದ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿನ ಜನರ ಪರಿಸ್ಥಿತಿಗೆ ಬೇಸತ್ತು ಬಾರದವರನ್ನು ಬಂದಿದ್ದರೆ ಜನರೇ ಮಾರಿಹಬ್ಬ ಮಾಡ್ತಿದ್ದರು ಎಂದು ಹೇಳಿದ್ದಾರೆ. ಈ ಅವಾಂತರ ಇನ್ನು ಮುಂದಾದರೂ ತಪ್ಪಲಿ. ಜನ ನೆಮ್ಮದಿಯಾಗಿ ಇರುವಂತಾಗಲಿ ಎಂದು ಆಶಿಸಿದ್ದಾರೆ.

ಅವರ ಮನದಾಳದ ಮಾತು ಇಂತಿದೆ ನೋಡಿ


ಇಂದಿನ ಮಹಾ ಮಳೆಗೆ ತತ್ತರಿಸಿದ ಹೊಸಮನೆ ಬಡಾವಣೆ ರಾಜಕಾಲುವೆ ನೀರು ನುಗ್ಗಿ ಮುನ್ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದ್ದು ನೂರಾರು ಮನೆಗಳಲ್ಲಿ ನಾಲ್ಕರಿಂದ ಐದು ಅಡಿ ಎತ್ತರದ ವರಿಗೂ ನೀರು ತುಂಬಿದೆ ಮನೆಯ ಗೃಹಪಯೋಗಿವಸ್ತುಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಇಲ್ಲಿಯ ಮಕ್ಕಳು ವಯೋವೃದ್ಧರು ಬಾಣಂತಿಯರು ಅನಾರೋಗ್ಯ ಪೀಡಿತರು ಹಾಗೂ ಜನಸಾಮಾನ್ಯರ ಸ್ಥಿತಿ ನರಕಯಾತನೆ ಅನುಭವಿಸಿದ್ದು ಪಾಲಿಕೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಜನ ಶಾಪ ಹಾಕುತ್ತಿದ್ದಾರೆ.
ಇಂತಹ ಸ್ಥಿತಿಗೆ ಬಡಾವಣೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯ ನಿಜ ಬಣ್ಣ ಬಯಲಾಗಿದೆ ಹಾಗೂ ರಾಜಕಾಲುವೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹತ್ತಾರು ಬಾರಿ ಪಾಲಿಕೆಯ ಮೀಟಿಂಗ್ನಲ್ಲಿ ಕ್ಷೇತ್ರದ ಶಾಸಕರಲ್ಲಿ ಮನವಿ ಮಾಡಿ ಅಂಗಲಾಚಿ ಕೇಳಿಕೊಂಡರು ಕಾರ್ಯರೂಪಕ್ಕೆ ತರದ ನಮ್ಮ ಮಹಾನ್ ನಾಯಕರು ಹಾಗೂ ಪಾಲಿಕೆಯ ಅಧಿಕಾರಿಗಳು
ಇತ್ತ ಸುಳಿಯದ ಕ್ಷೇತ್ರದ ಶಾಸಕರು ಮೇಯರ್ ರವರು ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಎಂ ಡಿ ರವರು ಇವತ್ತು ನಮ್ಮ ಜನರ ಕೈಯಲ್ಲಿ ಸಿಕ್ಕಿದ್ದರೆ ನಡೆಯುತ್ತಿತ್ತು ನಿಜವಾದ ಮಾರಿಹಬ್ಬ
ಧಿಕ್ಕಾರವಿರಲಿ

ರೇಖಾ ರಂಗನಾಥ್
ಸದಸ್ಯರು
ಶಿವಮೊಗ್ಗ ಮಹಾನಗರ ಪಾಲಿಕೆ

Exit mobile version