Site icon TUNGATARANGA

ಸೂಡಾ ಕಳಪೆ ಕಾಮಗಾರಿ, ಒಡೆದ ಸೋಮಿನಕೊಪ್ಪ ಕೆರೆಗೆ ನೀರು ಬರುವಕೋಡಿ, ಸಾವಿನಂಚಿಗೆ ತಲುಪಿದ ಕುದುರೆಗಳು !

ಶಿವಮೊಗ್ಗ,ಮೇ. 19;
ಶಿವಮೊಗ್ಗ ಸೂಡಾದ ಕಳಪೆ ಕಾಮಗಾರಿ, ಲೇ ಔಟ್ ಗಾಗಿ ಅಕ್ರಮವಾಗಿ ಕರೆ ಮಣ್ಣು ಸಾಗಿಸಿಕೊಂಡ ಪರಿಣಾಮ ಸೋಮಿನಕೊಪ್ಪ ಭೋವಿ ಕಾಲೋನಿ ಕೆರೆಗೆ ನೀರು ಹರಿದು ಬರುವ ಕೋಡಿ ಒಡೆದು ಹೋಗಿ ಅಪಾರ ಪ್ರಮಾಣದ ನೀರು ನುಗ್ಗಿದೆ. ಕೆರೆ ತುಂಬುತ್ತಿದೆ
ಈ ನೀರು ಹರಿದ ಪರಿಣಾಮ ಹತ್ತಕ್ಕೂ ಹೆಚ್ಚು ಕುದುರೆಗಳು ಬಂಧಿ ಆಗಿ ತಬ್ಬಲಿಯಾಗಿರುವ ಘಟನೆ ವರದಿಯಾಗಿದೆ. ಇನ್ನೊಂದು ಗಂಟೆ ನೀರು ಬಂದರೆ ಈ ಕುದುರೆಗಳ ಸಾವು ಖಚಿತ.


ಮಳೆ ಬರ್ಜರಿಯಾಗಿ ಬಂದಿದೆ ನಿಜ. ಆದರೆ, ಸರಿ ಸುಮಾರು ಆರಿ ಕೋಟಿ ರೂ ವೆಚ್ಚದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮಾಡುತ್ತಿರುವ ಕಾಮಗಾರಿ ಎಷ್ಡು ಪಕ್ಷವಾಗಿದೆ ಅಲ್ಲವೇ? ಸಮರ್ಪಕವಾದ ಕೆರೆಯ ಕೋಡಿ ನಿರ್ಮಿಸದ ಹಿನ್ನೆಲೆಯಲ್ಲಿ ಹಾಗೂ ಲೆಕ್ಕವಿಲ್ಲದಂತೆ ಅಕ್ರಮವಾಗಿ ತಗೆದ ಮಣ್ಣಿನಿಂದ ಸ್ಥಳೀಯರು ಪರದಾಡಬೇಕಾದ ಪರಿಸ್ಥಿತಿ ಬಂದಿರುವುದಂತೂ ಸತ್ಯ. ಸದ್ಯ ಕುದುರೆಗಳನ್ಮು ದಡ ಸೇರಿಸಲು ಸ್ಥಳೀಯರು ಕಷ್ಟ. ಪಡುತ್ತಿದ್ದಾರೆ.

Exit mobile version