Site icon TUNGATARANGA

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಶೇ.85.62 ಉತ್ತೀರ್ಣ, ಶಿವಮೊಗ್ಗಕ್ಕೆ ಎ ಗ್ರೇಡ್


ಬೆಂಗಳೂರು, ಮೇ.೧೯:
೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು(ಗುರುವಾರ) ಪ್ರಕಟಗೊಂಡಿದ್ದು, ಶೇ.೮೫.೬೩ ಫಲಿತಾಂಶ ಬಂದಿದೆ. ೭,೩೦,೮೮೧ ಮಂದಿ ಪಾಸ್ ಆಗಿದ್ದಾರೆ. ಈ ಪೈಕಿ ೩,೫೮,೬೦೨ ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಇದರಲ್ಲಿ ೩,೭೨,೨೭೯ ಹೆಣ್ಣುಮಕ್ಕಳು, ೩,೫೮,೬೦೨ ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಗುರುವಾರ ಮಧ್ಯಾಹ್ನ ೧೨.೩೦ಕ್ಕೆ ಸುದ್ದಿಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಘೋಷಿಸಿದರು. ಮಧ್ಯಾಹ್ನ ೧ ಗಂಟೆಯ ನಂತರ hಣಣಠಿs://ಞಚಿಡಿಡಿesuಟಣs.ಟಿiಛಿ.iಟಿ/ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು. ಶುಕ್ರವಾರ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿ ಸಿಕೊಂಡಿರುವ ಮೊಬೈಲ್?ಗಳಿಗೂ ಫಲಿತಾಂಶದ ಸಂದೇಶ ಬರಲಿದೆ.


ಒಟ್ಟು ೧೪೫ ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ೩೦೯ ವಿದ್ಯಾರ್ಥಿಗಳು ೬೨೫ಕ್ಕೆ ೬೨೪ ಅಂಕ ಪಡೆಯುವ ಮೂಲಕ ೨ನೇ ಸ್ಥಾನ ಪಡೆದಿದ್ದಾರೆ. ರಾಜ್ಯದ ೩೯೨೦ ಶಾಲೆಗಳಿಗೆ ಶೇ.೧೦೦ ಫಲಿತಾಂಶ ಸಿಕ್ಕಿದೆ. ೨೦ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಶಿವಮೊಗ್ಗಕ್ಕೆ ಎ ಗ್ರೇಡ್: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಸೇರಿ ೩೨ ಜಿಲ್ಲೆಗಳಿಗೆ ಎ-ಗ್ರೇಡ್ ಲಭಿಸಿದೆ. ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ಜಿಲ್ಲೆಗೆ ಬಿ-ಗ್ರೇಡ್ ಲಭಿಸಿದೆ. ಶೇ.೭೫ರಿಂದ ೧೦೦ ಫಕಿತಾಶ ಪಡೆದ ಜಿಲ್ಲೆಗಳಿಗೆ ಎ-ಗ್ರೇಡ್, ಕನಿಷ್ಠ ಶೇ.೬೦ರಿಂದ ಗರಿಷ್ಠ ಶೇ.೭೫ರೊಳಗೆ ಫಲಿತಾಂಶ ಪಡೆದ ಜಿಲ್ಲೆಗೆ ಬಿ-ಗ್ರೇಡ್ ಹಾಗೂ ಶೇ.೬೦ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿದ ಜಿಲ್ಲೆಗಳಿಗೆ ಸಿ-ಗ್ರೇಡ್ ಅನ್ನು ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತದೆ.

Exit mobile version