Site icon TUNGATARANGA

ಮುಂದುವರೆದ ಕೊರೊನಾಬ್ಬರ ಒಂದೇ ದಿನ ಶಿವಮೊಗ್ಗದಲ್ಲಿ 223, ರಾಜ್ಯದಲ್ಲಿ 7040 ಜನರಿಗೆ ಸೋಂಕು

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಜಿಲ್ಲೆಯೊಂದರಲ್ಲೆ ಇಂದು ಬಂದ ಮಾಹಿತಿಯ ಪ್ರಕಾರ 223 ಜನರಿಗೆ ಸೊಂಕು ವರದಿಯಾಗಿದ್ದು, ನಗರದಲ್ಲಿಯೇ ಸುಮಾರು 103 ಪ್ರಕರಣಗಳು ದಾಖಲಾಗಿರುವುದು ಆತಂಕ ಸೃಷ್ಠಿಸಿದೆ.
ಇನ್ನೂ ಉಳಿದಂತೆ ಶಿಕಾರಿಪುರದಲ್ಲಿ71, ಭದ್ರಾವತಿ 34, ತೀರ್ಥಹಳ್ಳಿ 02, ಹೊಸನಗರ 05, ಸೊರಬ ಹಾಗೂ ಸಾಗರ ತಲಾ 01ರಂತೆ 223 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ 4307 ಸೋಂಕು ದಾಖಲಾಗಿದ್ದು, 73 ಮಂದಿ ಸಾವನ್ನಪಿದ್ದಾರೆ.
ಇಲ್ಲಿ ಸೋಂಕಿತರ ಸಂಖ್ಯೆ ಗಿಂತ ಅತ್ಯಧಿಕವಾಗಿ ಅದರ ಬಳಕೆಯ ಹಣದ ಬಗ್ಗೆ ನೂರೆಂಟು ಪ್ರಶ್ನೆಗಳು ಬಂದಿವೆ. ಹುಡುಕಾಟ ಮಾದ್ಯಮಗಳದಾಗಬೇಕಿದೆ.


ರಾಜ್ಯದಲ್ಲಿ ಒಂದೇ ದಿನ 7040 ಮಂದಿಗೆ ಸೋಂಕು


ಬೆಂಗಳೂರು:ರಾಜ್ಯದಲ್ಲಿ ಇಂದು ಒಟ್ಟು 7040 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.
ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 6680 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 124 ಸೋಂಕಿತರು ಮೃತಪಟ್ಟಿದ್ದಾರೆ.


ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದ್ದು, ನಮ್ಮಲ್ಲಿ ಒಟ್ಟು 2,26,966 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ನಡುವೆ ಸೋಂಕಿತರ ಚೇತರಿಕೆ ಸಂಖ್ಯೆಯೂ ಲಕ್ಷದ ಗಡಿಯನ್ನು ದಾಟಿರುವುದು ಆಶಾದಾಯಕ ವಿಷಯವಾಗಿದೆ. 1,41,491 ಸೊಂಕಿತರು ಇದೀಗ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 81,512 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.
ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 3947 ಸಾವಿನ ಪ್ರಕರಣಗಳು ದಾಖಲಾಗಿವೆ.

ಆಸ್ಪತ್ರೆಯಿಂದ ರಾಮುಲು ಬಿಡುಗಡೆ


ಬೆಂಗಳೂರು: ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. 
ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಶ್ರೀರಾಮುಲು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರಿಗೆ ಕೊರೋನಾ ಸೋಂಕು ಸಂಪೂರ್ಣವಾಗಿ ಗುಣಮುಖವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Exit mobile version