ಶಿವಮೊಗ್ಗ,ಮೇ.19:
ಮೊನ್ನೆ ಸಂಜೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಲೊಂದಿಷ್ಟು ಎಂಬಂತೆ ಸುರಿಯುತ್ತಿರುವ ಜಿಟಿಜಿಟಿ ಹಾಗೂ ಬಾರೀ ಮಳೆ ನಡುವೆ ಕೆಲ ಗ್ರಾಮಪಂಚಾಯತಿಗಳ ಚುನಾವಣೆಯ ಮತದಾನ ನಡೆಯುತ್ತಿದೆ. ಇದರ ನಡುವೆ ಶಾಲಾ ಕಾಲೇಜುಗಳ ವಿಷಯ ಮಾತ್ರ ಮೌನವಾಗಿದೆ.
ರಾಜ್ಯ ಸರ್ಕಾರದ ರಾಜ್ಯದ 12 ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಿಸಿದ್ದರೆ, ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲಾರ್ಟ್ ಘೋಷಿಸಿದೆ.
ನಿನ್ನೆ ಬೆಳಿಗ್ಗೆಯಿಂದ ಇಂದು ಈಗಿನವರೆಗೂ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾರೀ ಮಳೆಯಾಗುತ್ತಿದೆ.
ಅನಗತ್ಯ ದಿನಗಳಲ್ಲಿ ಉದ್ದೇಶವಿಲ್ಲದೇ ರಜೆ ಕೊಡುವ ವ್ಯವಸ್ಥೆ ನಡುವೆ ಇಂದಿನ ಪರಿಸ್ಥಿತಿ ಶಿಕ್ಷಣ ಇಲಾಖೆಗೆ ಅರ್ಥವಾಗದಿರುವುದು ದುರಂತದ ಸಂಗತಿ ಎಂದು ಬಹಳಷ್ಟು ಶಾಲೆಗಳ ಶಿಕ್ಷಕ ವೃಂದ ಆರೋಪಿಸಿದೆ.
ಇವತ್ತು ಬೆಳಿಗ್ಗೆಯೂ ಇಂತಹ ಮಳೆ ದಾರಾಕಾರವಾಗಿ ಸುರಿಯುತ್ತಿರುವಾಗ ಹೇಗೆ ತಾನೇ ಮಕ್ಕಳು ಶಾಲೆಗೆ ಬರಲು ಸಾದ್ಯ ಎಂದು ಪೋಷಕರು ಹಾಗೂ ಮಕ್ಕಳು ಆಕ್ಷೇಪಿಸಿದ್ದಾರೆ.
ಚುನಾವಣೆ, ಸರ್ಕಾರಿ ಇಲಾಖೆ ಕಾರ್ಯಕ್ರಮಗಳು, ಕರ್ತವ್ಯಗಳು ಬೇಕಿದ್ದರೆ ನಡೆಯಲಿ, ಆದರೆ, ಮೊನ್ನೆಯಷ್ಟೇ ಬಹಳ ಸಮಯದ ನಂತರ ಶಾಲೆಗೆ ಬರಲಾರಂಭಿಸಿದ ಮಕ್ಕಳಿಗೆ ಈ ಕಿರಿಕಿರಿ ಸಹ್ಯವಾಗುತ್ತದಾ? ಅಧಿಕಾರಿಗಳು ಯೋಚಿಸಬೇಕಿದೆ ಎಂದು ಹಲವು ಪ್ರಮುಖರು ತಿಳಿಸಿದ್ದಾರೆ.