Site icon TUNGATARANGA

ಮೇ.23: ಶ್ರೀರಾಮಾನುಜಾಚಾರ್ಯ ಅವರ 1005ನೇ ವರ್ಷದ ಜಯಂತೋತ್ಸವ ನಿಮಿತ್ತ ಭದ್ರಾವತಿ ನಾಗರಕಟ್ಟೆಯಲ್ಲಿ ವೈಷ್ಣವ ಸಮಾಜದ ಸಾಮೂಹಿಕ ಉಪನಯನ


ಶಿವಮೊಗ್ಗ, ಮೇ.೧೮;
ಭದ್ರಾವತಿ ತಾಲ್ಲೂಕು ವೈಷ್ಣವ ಪರಿಷತ್ ಹಾಗೂ ಹೊಳೆಹೊನ್ನೂರು ಹೋಬಳಿ ಹಾಗೂ ಸಿದ್ಲಿಪುರದ ಶ್ರೀವೈಷ್ಣವ ಸೇವಾ ಸಮಿತಿ ಸಹಯೋಗ ದೊಂದಿಗೆ ಜಗದ್ಗುರು ಶ್ರೀ ಭಗವದ್ ಶ್ರೀರಾಮಾನುಜಾಚಾರ್ಯ ಅವರ 1005ನೇ ವರ್ಷದ ಜಯಂತೋತ್ಸವ ನಿಮಿತ್ತ ಮೇ.23ರಂದು ಭದ್ರಾವತಿ ಕಾಗದ ನಗರದ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಸಾಮೂಹಿಕ ಉಪನಯನ ಮತ್ತು ಮೇಲುಕೋಟೆ ಗುರುಗಳಿಂದ ಸಮಾಶ್ರಯಣ (ಮುದ್ರಾಧಾರಣೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಮೇಲುಕೋಟೆ ಯತೀರಾಜ ಮಠದ ಯಾದಗಿರಿ ಯತೀರಾಜ ನಾರಾಯಣಜೀಯರ್ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಸಾಮಾಜಿಕ ಸೇವಾ ಕಾರ್ಯಕರ್ತರಾದ ಹೊನ್ನಟ್ಟಿ ಹೊಸೂರಿನ ಉಷಾ ಸತೀಶ್‌ಗೌಡ ವಹಿಸಿಕೊಂಡಿರುತ್ತಾರೆ. ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಕೆ.ಬಿ.ಅಶೋಕ್‌ನಾಯ್ಕ್, ನಗರಸಭೆ ಸದಸ್ಯ ಬಸವರಾಜ್ ಬಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಉಪನಯನಕ್ಕೆ ಹೆಸರು ನೊಂದಾಯಿಸಿ. ವೈಷ್ಣವ ಸಮಾಜದ ಸರ್ವರೂ ಉಪನಯನಕ್ಕೆ ತಮ್ಮ ಹೆಸರು ನೊಂದಾಯಿಸಲು ಅವಕಾಶವಿದ್ದು, ಹೆಚ್ಚಿನ ಮಾಹಿತಿ ಹಾಗೂ ಹೆಸರು ನೊಂದಾಯಿಸಲು ಮೊ.8971263737, 6361633891, 9663765008 ಗೆ ಸಂಪರ್ಕಿಸಲು ನಾಗರಕಟ್ಟೆ ಶ್ರೀಕ್ಷೇತ್ರದ ಪ್ರಧಾನ ಅರ್ಚಕರು, ವೈಷ್ಣವ ಸಮಾಜದ ಸಂಘಟನೆಗಳು ಕೋರಿವೆ.

Exit mobile version