Site icon TUNGATARANGA

ಎಂಗೇಜ್​ ಆದ್ರು ಕಾಜಲ್​ ಅಗರ್​ವಾಲ್​!

ಕಾಜಲ್​ ಸೈಲೆಂಟ್​ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಕೆಲ ತಿಂಗಳ ಹಿಂದೆ ನಟಿ ಕಾಜಲ್ ಅಗರ್​ವಾಲ್​ ಶೀಘ್ರವೇ ವಿವಾಹವಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗಾಗಲೇ ಹುಡುಗನೋರ್ವನನ್ನು ನೋಡಿದ್ದು, ಶೀಘ್ರವೇ ವಿವಾಹ ಆಗಲಿದ್ದಾರೆ ಎನ್ನಲಾಗಿತ್ತು. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ವಿಚಾರ ಎಂದರೆ ಕಾಜಲ್​ ರಹಸ್ಯವಾಗಿ ಎಂಗೇಜ್​ಮೆಂಟ್​ ಆಗಿದ್ದಾರಂತೆ. ಎಂಗೇಜ್​ಮೆಂಟ್​ಗೆ ಕಾಜಲ್​ ಆತ್ಮೀಯ ಗೆಳೆಯ ಬೆಲ್ಲಮಕೊಂಡ ಶ್ರೀನಿವಾಸ್​ ಕೂಡ ಎಂಗೇಜ್​ಮೆಂಟ್​ನಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಈ ಸುದ್ದಿ ಹೊರ ಬಂದಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಕಾಜಲ್​ ಮದುವೆ ಆಗುತ್ತಿರುವ ಹುಡುಗನ ಹೆಸರು ಗೌತಮ್ ಎನ್ನಲಾಗಿದೆ. ಗೌತಮ್​ ಸಿನಿಮಾ ಇಂಡಸ್ಟ್ರಿಯವರಲ್ಲ. ಅವರು, ತಮ್ಮದೇ ಉದ್ಯಮ ಹೊಂದಿದ್ದಾರೆ ಎನ್ನಲಾಗಿದೆ.

Exit mobile version