Site icon TUNGATARANGA

ಪಿಎಸ್‌ಐ ನೇಮಕಾತಿ ಹಗರಣ: ಸಿಬಿಐಗೆ ಒಪ್ಪಿಸಿ

ಸಾಗರ, ಮೇ.17
ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಹಿಂದೆ ಇರುವ ನಿಜವಾದ ವ್ಯಕ್ತಿಗಳು ಹೊರಬರ ಬೇಕು ಎಂದಾದರೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿಯ ಹಲವು ಪ್ರಮುಖರು ಭಾಗಿಯಾಗಿದ್ದಾರೆ. ಸಿಐಡಿ ರಾಜ್ಯ ಸರ್ಕಾರದ ಕೈಗೊಂಬೆ ಆಗಿರುವುದರಿಂದ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಯುವಜನರ ಭವಿಷ್ಯದ ಕನಸನ್ನು ನುಚ್ಚುನೂರು ಮಾಡಿರುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕಾದರೆ ಸಿಬಿಐ ತನಿಖೆಯಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಸೇತುವೆ ನಿರ್ಮಾಣಕ್ಕೆ ೯೮ ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಶಾಸಕ ಹಾಲಪ್ಪ ಹರತಾಳು ಅವರು ತಮಗೆ ಶೇ ೪೦ರಷ್ಟು ಕಮಿಷನ್ ತಲುಪಿಲ್ಲ ಎನ್ನುವ ಕಾರಣಕ್ಕೆ ಈ ಸೇತುವೆ ಕಾಮಗಾರಿ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು

.
ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಐ.ಎನ್. ಸುರೇಶ್ ಬಾಬು, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಮಾಜಿ ಸದಸ್ಯರಾದ ಡಿ.ದಿನೇಶ್, ತಾರಾಮೂರ್ತಿ, ಪ್ರಮುಖರಾದ ಅಶೋಕ್ ಬೇಳೂರು, ಯಶವಂತ ಫಣಿ, ಸೈಯದ್ ಅನ್ವರ್ ಇದ್ದರು.

Exit mobile version