Site icon TUNGATARANGA

ಎರಡೂವರೆ ಲಕ್ಷ ಹಣದೊಂದಿಗೆ ಹೆಂಡ್ತಿ ನಾಪತ್ತೆ…., ಕಾಯುತ್ತಿರುವ ಪತಿರಾಯ! ಮಹಿಳೆ ಎಲ್ಲಿ ಹೋದಳು?

ಶಿವಮೊಗ್ಗ, ಮೇ.17:
ಹಣ ನಾಪತ್ತೆಯಾಯ್ತು ಅಂದ್ರೆ ಹೋಗ್ಲಿ ಬಿಡಿ, ಮತ್ತೆ ದುಡಿಯಬಹುದು ಎನ್ನುವುದು ವಾಡಿಕೆ. ನಾಪತ್ತೆಯಾದ ಹಣದೊಂದಿಗೆ ಅದನ್ನು ಹುಡುಕಿ ತರುತ್ತೇನೆ ಎಂದಿದ್ದ ಹೆಂಡತಿಯೂ ಕಳೆದ ನಾಲ್ಕು ದಿನದಿಂದ ನಾಪತ್ತೆಯಾದ್ರೆ ಏನು ಕಥೆ?
ಸಮೀಪದ ಮತ್ತೂರು ಕಡೇಕಲ್ ನಿವಾಸಿಯೊಬ್ಬರು ಈ ಶಾಕ್ ಗೆ ಒಳಗಾಗಿದ್ದಾರೆ. ಹಣದದ ಜೊತೆ ಹೆಂಡ್ತಿಯನ್ನೂ ಕಳೆದುಕೊಂಡು ಈಗ ಹೆಂಡ್ತಿಗಾಗಿ ಕಾಯುತ್ತಲೇ ಇದ್ದಾರೆ.


ಶಿವಮೊಗ್ಗದ ಕೋಳಿ ಫಾರಂನ ಮಾಲೀಕನಿಗೆ ಲಕ್ಷಾಂತರ ರೂ ಹಣ ಕೊಡಲು ಪತ್ನಿ ಸಮೇತ ಬಂದವನಿಗೆ ಅದರಲ್ಲಿನ ಎರಡೂವರೆ ಲಕ್ಷ ಹಣನೂ ಇಲ್ಲ, ಹೆಂಡ್ತಿನೂ ಸಿಗಲಿಲ್ಲವೆಂಬಂತಾಗಿದೆ.
ಕಡೇಕಲ್ ನಿಂದ ಪತ್ನಿಯೊಂದಿಗೆ 6 ಲಕ್ಷ ರೂ. ಹಣ ತಗೆದುಕೊಂಡು ಬೈಕ್ ನಲ್ಲಿ ಹೊರಟಿದ್ದ ಕುಮಾರ್ ನೇರವಾಗಿ ಶಿವಮೊಗ್ಗದ ಲಷ್ಕರ್‌ಮೊಹಲ್ಲಾಕ್ಕೆ ಬಂದು ಇಳಿಯುತ್ತಾನೆ.


ಕೋಳಿ ಫಾರಂ ಮಾಲೀಕನಿಗೆ ಹಣ ಕೊಟ್ಟು ಬರೋಣವೆಂದು ಪತ್ನಿಗೆ ಕರೆಯುತ್ತಾನೆ. ಇಲ್ಲಾ ನೀವು ಹೋಗಿ ನಾನು ಇಲ್ಲೇ ತರಕಾರಿ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗ್ತಾರೆ.


ಅಲ್ಲಿ 2½ ಲಕ್ಷದ ಹಣದ ಕವರ್ ಮಾಯ!


ಕೋಳಿ ಫಾರಂ ಮಾಲೀಕನ ಮುಂದೆ‌ ಬ್ಯಾಗ್ ಬಿಚ್ಚಿ 2½‌ಲಕ್ಷ ರೂ ಹಣವನ್ನ ಕವರ್ ನಲ್ಲಿ ಇಟ್ಟಿದ್ದನ್ನ ನೋಡ್ತಾನೆ. ಕವರೇ ಮಂಗಮಾಯವಾಗಿತ್ತು. ಪತ್ನಿಯ ಬಳಿ ಇರಬೇಕು ಎಂದು ತಿಳಿದು ಪತ್ನಿಯನ್ನ ವಿಚಾರಿಸೋಣವೆಂದು‌ ಬೈಕ್ ಬಳಿ ಬರ್ತಾನೆ.‌
ಬೈಕ್ ಬಳಿ ಬಂದ ಕುಮಾರ್‌ ಪತ್ನಿಗೆ‌ಕರೆ ಮಾಡಿದ್ದಾನೆ. ಕರೆಸ್ವೀಕರಿಸಿದ ಪತ್ನಿ ಹಣ ಕಳೆದುಹೋಗಿದೆ‌ ಹುಡುಕಿಕೊಂಡು ಬರುತ್ತೇನೆಂದು‌ ಹೇಳಿದ್ದಾರೆ. ಪತ್ನಿ ಈಗ ಬರ್ತಾರೆ ಆಗ ಬರ್ತಾರೆ ಅಂತ ಕಾಯುತ್ತಿದ್ದ ಕುಮಾರ್ ಗೆ ನಿರಾಶೆ ಮೂಡಿದೆ.
ದೂರು ದಾಖಲು
ಮೇ13 ರಂದು ನಡೆದ ಘಟನೆ ಇದು. ಇದುವರೆಗೂ ಪತ್ನಿ ವಾಪಾಸ್ ಬರಲೇ ಇಲ್ಲ. ಪತ್ನಿ ಪತ್ತೆಯಾಗದ ಹಿನ್ನಲೆಯಲ್ಲಿ ಕೋಟೆ ಠಾಣೆಗೆ ಪತಿರಾಯ ಮನುಷ್ಯ ಕಾಣೆ ಪ್ರಕರಣವೊಂದನ್ನ ದಾಖಲಿಸಿದ್ದಾರೆ.

Exit mobile version