Site icon TUNGATARANGA

ಫ್ಯಾಬ್ರಿಕೇಟರ‍್ಸ್ ಮೀಟ್ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹೊಸ ಕೈಗಾರಿಕೆಗಳಿಗೆ ಅವಕಾಶ

ಶಿವಮೊಗ್ಗ, ಮೇ.೧೬:
ಮೇಕ್‌ಇನ್‌ಇಂಡಿಯಾಯೋಜನೆಯಿಂದ ಹೊಸ ಹೊಸ ಕೈಗಾರಿಕೆಗಳಿಗೆ ಹಾಗೂ ಉದ್ಯಮಿಗಳಿಗೆ ಉತ್ತಮ ಅವಕಾಶ ಸಿಗುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಹೇಳಿದರು.


ಶಿವಮೊಗ್ಗ ನಗರದಲ್ಲಿಗಣೇಶ್‌ರೂಫಿಂಗ್ ಹಾಗೂ ಲ್ಯಾಂಡ್‌ಮಾರ್ಕ್‌ಕ್ರಾಫ್ಟ್ ಸಂಸ್ಥೆ ವತಿ ಯಿಂದ ಆಯೋಜಿಸಿದ್ದ ಫ್ಯಾಬ್ರಿಕೇಟರ‍್ಸ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕೈಗಾರಿಕಾಕ್ಷೇತ್ರದಲ್ಲಿ ಹೊಸ ಉದ್ಯಮ ಗಳಿಗೆ ಹಾಗೂ ಸಾಮಾನ್ಯ ಜನರಿಗೆ ಹಾಗೂ ಎಲ್ಲ ವರ್ಗದ ಜನರಿಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾದಿಂದ ಉತ್ತಮ ಅವಕಾಶ ಸಿಗುತ್ತಿದೆ. ಇದರಿಂದ ಉದ್ಯೋಗ ಸೃಷ್ಠಿ ಆಗುತ್ತಿದೆಎಂದು ತಿಳಿಸಿದರು.


ಉದ್ಯಮಿಗಳ ಸಮಾವೇಶಗಳಿಂದ ಕಂಪ ನಿಗಳ ಹೊಸ ಹೊಸ ಉತ್ಪನ್ನಗಳ ಪರಿಚಯ ಹಾಗೂ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಬಗ್ಗೆ ಎಲ್ಲರಿಗೂ ಪರಿಚಿತವಾಗು ತ್ತದೆ. ಎಲ್ಲಉದ್ಯಮಿದಾರರ ನಡುವೆಉತ್ತಮ ಸಂಪರ್ಕ ಸಂವಹನ ಸಾಧ್ಯವಾಗುತ್ತದೆ. ಕಾರ್ಮಿಕರಿಗೂ ಕೈಗಾರಿಕಾಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳ ಬಗ್ಗೆ ಅರಿವು ಮೂಡುತ್ತದೆ ಎಂದರು.


ಗಣೇಶ್ ರೂಫಿಂಗ್ ಸಂಸ್ಥೆಯು ಹಾಗೂ ಮಾಲೀಕ ಪ್ರದೀಪ್ ಎಲಿ ಅವರು ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯ ಬೆಲೆಯಲ್ಲಿ ವಿತರಿಸುತ್ತ ಮಾರುಕಟ್ಟೆಯಲ್ಲಿಉತ್ತಮ ಹೆಸರು ಹೊಂದಿದೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಸರ್ಕಾರದ ಸೌಲಭ್ಯ ಹಾಗೂ ಸಹಾಯಧನದ ಸಹಕಾರ ಪಡೆದು ಹೊಸ ಹೊಸ ಉದ್ಯಮ ಆರಂಭಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯತ್ವ ಪಡೆದುಕೊಳ್ಳ ಬೇಕು ಎಂದು ತಿಳಿಸಿದರು.


ಕಾರ್ಯದರ್ಶಿ ವಸಂತ್ ಹೋಬಳಿದಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣದ ಮೇಲ್ಭಾಗದಲ್ಲಿ ರೂಫಿಂಗ್ ಮಾಡಿಸುವ ಪ್ರವೃತ್ತಿ ಹೆಚ್ಚಾಗಿದೆ ಹಾಗೂ ಆವಶ್ಯಕತೆ ಇದೆ. ಕಟ್ಟಡ ವಿನ್ಯಾಸ ಹಾಗೂ ಭದ್ರತೆಯಲ್ಲಿ ಫ್ಯಾಬ್ರಿಕೇಟರ್ ಕಾರ್ಯಕ್ಷಮತೆ ಮುಖ್ಯಎಂದರು.


ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದ ನಿರ್ದೇಶಕ, ಗಣೇಶರೂಫಿಂಗ್ ಮಾಲೀಕ ಪ್ರದೀಪ್ ವಿ.ಎಲಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ವಿಪಿನ್ ಲಿಡೋ, ಇಂತಿ ಹಾಸ್, ರಾಕೇಶ್ ಇದ್ದರು.

Exit mobile version