ಶಿವಮೊಗ್ಗ, ಮೇ.15:
ಶಿವಮೊಗ್ಗ ನಗರದ, ಬಿ.ಹೆಚ್. ರಸ್ತೆಯ ಕರ್ನಾಟಕ ಸಂಘ ಪಕ್ಕದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಮಿಡ್ಲ್ ಸ್ಕೂಲ್) ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು, ರಾಜೀವಗಾಂಧಿ ವಿವಿಧ ಬಡಾವಣೆಗಳಲ್ಲಿ, ಶಾಲೆ ಪ್ರಾರಂಭ ಜೂನ್ ಒಂದು ಅಲ್ಲ, ಮೇ 16 ನಾಳೆಯಿಂದ ಆರಂಭವಾಗಲಿದೆ,
ಶಾಲೆಯ ಆವರಣ ಸ್ವಚ್ಛ ಗೊಳಿಸಿ, ರಂಗೋಲಿಯ ಚಿತ್ರ ಬಿಡಿಸಿ, ಬಾಳೆಗಂಭವ ಹಾಕಿ, ಮಾವಿನ ತೋರಣ ತೋಡಸಿ ಚಿನ್ನರರ ಆಗಮನಕ್ಕೆ ಶಿಕ್ಷಕರ ವೃಂದ, ಎಸ್ಡಿಎಂಸಿ, ಪದಾಧಿಕಾರಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸ್ವಾಗತ ಕೊರುತ್ತಿರುವರು, ಶಾಲೆಗೆ ಸೇರಲು ಮಕ್ಕಳ ಹೆಸರು ನೀಡಿದ ಪೋಷಕರಿಗೆ ಹಾಗೂ ಅವರ ಮಕ್ಕಳಿಗೆ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು “ರಜೆ ಸಾಕು, ಶಾಲೆಗೆ ಬನ್ನಿ” ಎಂದು ಹೇಳಿದರು.
ಜೂನ್ ಒಂದರ ಹೊರಗೂ ರಜೆಯೆಂದ, ಆಟದಲ್ಲಿ ಮಗ್ನ ವಾಗಿರುವ ಚಿನ್ನರಿಗೆ, ಹಾಗೂ ಮಕ್ಕಳನ್ನು ಊರಿಗೆ ಕಳಯಿಸಿದ ಪೋಷಕರಿಗೆ, ನಾಳೆ ಮೈ 16ಕ್ಕೆ ಶಾಲೆ ಆರಂಭ ಗೊಳ್ಳಲಿದೆ, ಎಲ್ಲಾ ಮಕ್ಕಳು ಶಾಲೆಗೆ ಬರಲು ಹೇಳಲಾಯಿತು, ಹಾಗೂ ಹೊಸದಾಗಿ ಶಾಲೆಗೆ ಸೇರುವ ಮಕ್ಕಳ ದಾಖಲಾತಿ ಮಾಡಿ ಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮೈನ್ ಮಿಡ್ಲ್ ಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಉಪಾಧ್ಯಕ್ಷ ಪರಶುರಾಮ, ಕಾರ್ಯದರ್ಶಿ ಸವಿತಾ, ಸಹ ಕಾರ್ಯದರ್ಶಿ ವಿಶ್ವನಾಥ್ ಜೆ, ಸದಸ್ಯರಾದ ರಾಮು, ವಸಂತ್ ನಾಯ್ಕ್, ಮುಖ್ಯ ಶಿಕ್ಷಕರಾದ ಶಾಂತಾ ಬಾಯಿ, ಸಹ ಶಿಕ್ಷಕರಾದ ಕವಿತಾ, ಸ್ಥಳೀಯ ಮುಖಂಡರಾದ ರಂಗೇಗೌಡ ರವರು ಹಾಗೂ ಇತರರು ಉಪಸ್ಥಿತರಿದ್ದರು.