Site icon TUNGATARANGA

ವೈಯಕ್ತಿಕ ಕೆಲಸಕ್ಕೆಂದು ದೆಹಲಿಗೆ ಭೇಟಿ ನೀಡಿದ್ದೆ: ಆರಗ ಜ್ಞಾನೇಂದ್ರ

ಶಿವಮೊಗ್ಗ : ವೈಯಕ್ತಿಕ ಕೆಲಸಕ್ಕೆಂದು ದೆಹಲಿಗೆ ಹೋಗಿದ್ದೆ ಅಷ್ಷೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಬೆಳಗ್ಗೆ ಹೇಳಿದ್ದಾರೆ


ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕೆಲಸಕ್ಕೆ ಎಂದು ದೆಹಲಿಗೆ . ಬಂದಿದ್ದೆ. ಅಷ್ಷೆ
ನೆನ್ನೆ ನಾನು ಹೋಗುವಾಗ ಸಿಎಂ ಕೂಡಾ ದೆಹಲಿಯಲ್ಲೇ ಇದ್ದರು, ಅವರನ್ನೂ ಸಹ ಭೇಟಿ ಮಾಡಿದ್ದೇನೆ ಎಂದರು.

ಬೆಳಗ್ಗೆ 8 ಗಂಟೆಗೆ ಒಬ್ಬರನ್ನು ಭೇಟಿ ಮಾಡಬೇಕಿತ್ತು,ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ.ಪ್ರಹ್ಲಾದ್ ಜೋಷಿ ಅವರನ್ನು ಎಲ್ಲಿ ಭೇಟಿ ಮಾಡಿದ್ದೇನೆ? ನಾನು ಅಲ್ಲಿ ಹೋದಾಗ ಅವರು ಈ ಕಡೆ ಬಂದಿದ್ದಾರೆ ಎಂದರು.

ಸಚಿವ ಸಂಪುಟದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ವೇಳೆ ಗೃಹ ಸಚಿವರು ದೆಹಲಿಗೆ ತೆರಳಿದ್ದು ಭಾರೀ ಕುತೂಹಲ ಮೂಡಿಸಿತ್ತು ಮಾತ್ರವಲ್ಲದೆ ಅವರ ಖಾತೆಯೂ ಸಹ ಬದಲಾಗುವ ಕುರಿತು ಚರ್ಚೆಗಳು ನಡೆದಿದ್ದವು.

Exit mobile version