Site icon TUNGATARANGA

ಆರ್.ಎಂ. ಮಂಜುನಾಥ ಗೌಡರಿಗೆ ಸಂದ ಜಯ: ಅನುಯಾಯಿಗಳ ಹರ್ಷ!

ಶಿವಮೊಗ್ಗ, ಆ.15:

ಜಿಲ್ಲಾ ಸಹಕಾರ ಕೇಂದ್ರಬ್ಯಾಂಕ್ ನ ಅಧ್ಯಕ್ಷ ಡಾ. ಆರ್. ಎಂ.ಮಂಜುನಾಥ ಗೌಡರನ್ನ ಸಹಕಾರ ಸಂಘಗಳ ಪ್ರಾಥಮಿಕ ಸದಸ್ಯತ್ವದಿಂದ ಅನರ್ಹಗೊಳಿಸಿರುವ ತೀರ್ಪನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಸಹಕಾರ ಇಲಾಖೆ ಜಂಟಿ‌ ನಿರ್ದೇಶಕರು ಹೊರಡಿಸಿದ್ದ ಆರ್‌ಎಂ ಎಂ ಸದಸ್ಯತ್ವ ರದ್ದತಿಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಇದೀಗ ಇಡೀ ಆದೇಶವನ್ನೇ ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಆರ್ ಎಂ ಮಂಜುನಾಥ ಗೌಡರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಂಡಿಸಿದ್ದು ನ್ಯಾಯಮೂರ್ತಿಗಳಾದ ಕೃಷ್ಣಾರೆಡ್ಡಿ ಆದೇಶ ನೀಡಿದ್ದಾರೆ.
ರಾಜಕೀಯ ದ್ವೇಷದ ಪಿತೂರಿಯಿಂದಾಗಿ ಆರ್ ಎಂ ಎಂ ರನ್ನು ಹಣಿಯಲು ಮುಂದಾದ ಶಕ್ತಿಗಳಿಗೆ ತೀವ್ರ ಮುಖಭಂಗವಾಗಿದ್ದು ಪ್ರಕರಣ ರದ್ದತಿ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಯ ದೊರಕಿದಂತಾಗಿದೆ ಎಂದು ಹೇಳಲಾಗುತ್ತಿದೆ. ಆದೇಶ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.
ಕೇವಲ ತಡೆಯಾಜ್ಞೆಯನ್ನು ನೀಡಲಾಗಿದೆ
ಆದೇಶ ರದ್ದುಗೊಂಡಿಲ್ಲ. ಕೇವಲ ತಡೆ ಸಿಕ್ಕಿದೆ ಅಷ್ಟೆ ಎಂದು ಹೇಳುತ್ತಿದ್ದವರು ಈಗಿನ ವರದಿಗೆ ತಬ್ಬಿಬ್ಬಾಗಿದ್ದಾರೆ. ಮಂಜುನಾಥಗೌಡ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

Exit mobile version