ಶಿವಮೊಗ್ಗ, ಮೇ.13:
ಭದ್ರಾವತಿ ತಾಲೂಕು ಹೆಂಚಿನ ಸಿದ್ದಾಪುರ ಗ್ರಾಮದಲ್ಲಿ ಭದ್ರ ಬಲನಾಲೆಗೆ ಈಜಲು ಹೋಗಿ ನೀರು ಪಾಲಾಗಿದ್ದ ಇಬ್ಬರೂ ಮಕ್ಕಳೂ ಶವವಾಗಿ ಪತ್ತೆಯಾಗಿದೆ. ಬರೊಬ್ಬರಿ ಎರಡು ದಿನದ ಹುಡುಕಾಟದಲ್ಲಿ ಅವರ ದೇಹಗಳು ಪತ್ತೆಯಾಗಿವೆ. ಆ ಇಡೀ ಭಾಗ ಮಕ್ಕಳ ಹೆತ್ತವರು, ಸಂಬಂಧಿಕರ ಜೊತೆ ಕಣ್ಣೀರಧಾರೆಯಲ್ಲಿ ಮೌನ ರೋಧನೆಯಲ್ಲಿ ಮುಳುಗಿತ್ತು.
ದೊಡ್ಡಪ್ಪನ ಜೊತೆ ನಾಲ್ವರು ಮಕ್ಕಳು ನಾಲೆಗೆ ಸ್ನಾನಕ್ಕೆ ಹೋಗಿದ್ದ ಮಕ್ಕಳು ನೀರುಪಾಲಾಗಿದ್ದರು. ಇಬ್ಬರನ್ನ ಜೀವಂತವಾಗಿ ರಕ್ಷಿಸಲಾಗಿದ್ದು ಇಬ್ವರು ನೀರುಪಾಲಾಗಿದ್ದರು.
ಚಂದನ ಮತ್ತು ಹರ್ಷ ಎಂಬ ಇಬ್ಬರು ಲೋಕೇಶ್ ಅವರ ಮಕ್ಕಳಾಗಿದ್ದು ನಿನ್ನೆ ಬೆಳಿಗ್ಗೆ ದೊಡ್ಡಪ್ಪ ಕುಬೇರಪ್ಪನವರೊಂದಿಗೆ ಸ್ನಾನಕ್ಕೆ ಬಂದು ನೀರುಪಾಲಾಗಿದ್ದರು. ಮೊದಲು ಅಕ್ಕ ಚಂದನಳ ಶವ ಪತ್ತೆಯಾದರೆ ಎರಡು ಗಂಟೆಯ ಅಂತರದಲ್ಲಿ ತಮ್ಮ ಹರ್ಷನೂ ಸಹ ಶವವಾಗಿ ಪತ್ತೆಯಾಗಿದ್ದಾನೆ. ಚಂದನಳ ಶವ ಸಿಕ್ಕ ಸ್ವಲ್ಪ ಅಂತರದಲ್ಲಿ ಹರ್ಷನ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗ/ ಹುಲಿ-ಸಿಂಹಧಾಮದ ರಾಮು ಇನ್ನಿಲ್ಲ…. ಸಹಜ ಸಾವು https://tungataranga.com/?p=10920
ಘಟನೆಯ ವಿವರ
ರಜೆಯ ಮಜೆಯೊಳಗೆ ತುಂಬಿದೆ ಭದ್ರೆಯ ನಾಲೆಯೊಳಗೆ ಈಜುವ ತವಕ ಹೊಂದಿದ್ದ ನಾಲ್ವರು ಮಕ್ಕಳಲ್ಲಿ ಇಬ್ನರು ದುರಾದೃಷ್ಟವಶಾತ್ ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ಭದ್ರಾವತಿ ತಾ. ಹೆಂಚಿನ ಸಿದ್ದಾಪುರ ಬಳಿ ಹರಿಯುವ ಭದ್ರಾ ನಾಲೆಯಲ್ಲಿ ನಡೆದಿದೆ.
ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ಈ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನದಿಂದ ನಾಪತ್ತೆಯಾದ ಮಕ್ಕಳಿಗೆ ಹುಡುಕಾಡಲಾಗುತ್ತಿದೆ.
ಶಿವಮೊಗ್ಗ ತಾ. ಮುದುವಾಲದ ಚಂದನಾ (14) ಮತ್ತು ಹರ್ಷ (10) ನಾಪತ್ತೆಯಾಗಿರುವ ದುರ್ದೈವಿ ಮಕ್ಕಳು. ಹೊಳೆಹೊನ್ನೂರು ರಸ್ತೆಯ ಅಗರದಹಳ್ಳಿ ಬಳಿ ಭದ್ರಾ ಬಲದಂಡೆ ನಾಲೆಯಲ್ಲಿ ಮಕ್ಕಳು ತಮ್ಮ ದೊಡ್ಡಪ್ಪನೊಂದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾರೆ.
ರಜೆಗೆ ದೊಡ್ಡಪ್ಪನ ಮನೆಗೆ ಬಂದಿದ್ದ ಈ ಮಕ್ಕಳು ಶಿವಮೊಗ್ಗ ತಾಲೂಕು ಮುದುವಾಲ ಗ್ರಾಮದವರು. ಶಾಲೆಗೆ ರಜೆ ಇದ್ದ ಹಿನ್ನೆಲೆ ಇವರು ದೊಡ್ಡಪ್ಪನ ಮನೆಗೆ ಬಂದಿದ್ದರು. ಬುಧವಾರ ದೊಡ್ಡಪ್ಪನ ಜೊತೆಗೆ ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನಾಲೆಯಲ್ಲಿ ನಾಪತ್ತೆಯಾಗಿದ್ದಾರೆ. ಅದೃಷ್ಟಾವಶಾತ್ ದೊಡ್ಡಪ್ಪನ ಕೈಲಿದ್ದ ಒಂದು ಮಗು ಹಾಗೂ ಕುರಿ ಮೇಯಿಸುವ ಹುಡುಗ ಇನ್ನೊಂದು ಹುಡುಗನನ್ನು ರಕ್ಷಿಸಿದ್ದಾರೆ.
ಮಕ್ಕಳು ನಾಪತ್ತೆ ಪ್ರಕರಣ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಬೋಟ್ ಬಳಸಿ ಶೋಧ ಕಾರ್ಯ ನಡೆಸಿದ್ದು. ಬುಧವಾರ ಮಕ್ಕಳು ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಗುರುವಾರ ಶೋಧ ಕಾರ್ಯ ಪುನಾರಂಭ ಮಾಡಲಾಗಿತ್ತು. ಸಂಜೆ ಹೊತ್ತು ಮುಳುಗುವಾಗ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.