Site icon TUNGATARANGA

ಸಂಪುಟ ವಿಸ್ತರಣೆ : ಶಿವಮೊಗ್ಗದಲ್ಲಿ ಹರತಾಳು ಹಾಲಪ್ಪರಿಗೆ ಮತ್ತೊಮ್ಮೆ ಮಣೆ..? ಏಕೆ ಗೊತ್ತಾ?

ಶಿವಮೊಗ್ಗ : ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಮುಖರು ಹೇಳಿದ್ದಾರೆ ಎನ್ನಲಾಗಿದ್ದರೂ ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆಯ ಈ ಹೊತ್ತಿನಲ್ಲಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಹೊಸತನ ತರಲು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.


ಬಹತೇಕ ಮಂತ್ರಿಗಳು ಬದಲಾಗುವ ಹಾಗೂ ಹೊಸ ಮುಖಗಳಿಗೆ ಅವಕಾಶ ದೊರಕುವ ಸಾಧ್ಯತೆಗಳು ನಿಶ್ಚಳವಾಗಿದ್ದು, ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸ್ಥಾನವನ್ನು ಈಡಿಗ ಸಮಾಜವನ್ನು ಆಯ್ಕೆಮಾಡಿಕೊಂಡು ಮಾಜಿ ಮಂತ್ರಿ ಹರತಾಳು ಹಾಲಪ್ಪ ಅವರಿಗೆ ಸಿಗುವ ಎಲ್ಲಾ ಸಾಧ್ಯತೆಗಳು ಬಹುದೊಡ್ಡ ಮಟ್ಟದಲ್ಲಿ ನಡೆದಿವೆ ಎನ್ನಲಾಗುತ್ತಿದೆ.


ಸಾಗರದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಮಂತ್ರಿ ಕಾಗೋಡು ತಿಮ್ಮಪ್ಪ ಅವರ ಪ್ರಭಾವದ ನಡುವೆ ಬೇಳೂರು ಗೋಪಾಲಕೃಷ್ಣ ಅವರ ವರ್ಚಸ್ಸಿನ ನಡುವೆ ಮತ್ತೆ ಕ್ಷೇತ್ರವನ್ನು ಪಡೆಯುವ ಜೊತೆಗೆ ಸೊರಬ, ತೀರ್ಥಹಳ್ಳಿ, ಹೊಸನಗರ ಮೊದಲಾದ ಕಡೆ ಈಡಿಗ ಸಮಾಜದ ಮತಗಳನ್ನು ಕ್ರೂಢಿಕರಿಸುವ ನಿಟ್ಟಿನಲ್ಲಿ ಇಂತಹ ನಿರ್ಧಾರಕ್ಕೆ ನಿಕಟ ಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅಸ್ತು ಎಂದಿದ್ದಾರೆ ಎಂದು ಹೇಳಲಾಗುತ್ತಿದೆ.


ಸೊರಬದಲ್ಲಿ ಕುಮಾರ್ ಬಂಗಾರಪ್ಪ ಹಾಗೂ ಅಲ್ಲಿನ ಪಕ್ಷದ ಘಟಕದ ನಡುವೆ ಅಷ್ಟಕಷ್ಟೆ ಸಂಬಂಧವಿರುವುದು ಹರತಾಳು ಹಾಲಪ್ಪ ಅವರ ಹೆಸರನ್ನು ಮೇಲ್ಪಂಕ್ತಿಗೆ ತಂದಿದೆ ಎನ್ನಲಾಗಿದೆ. ಸಂಪೂರ್ಣ ವಿಸ್ತರಣೆಯಾದರೆ ಮತ್ತೆ ಹಾಲಪ್ಪ ಸಚಿವರಾಗುತ್ತಾರೆ ಎಂಬುದು ಸದ್ದುಮಾಡದೇ ಸುದ್ದಿಯಾಗುತ್ತಿರುವ ವಿಷಯ.

Exit mobile version