Site icon TUNGATARANGA

ಫಲಿತಾಂಶಕ್ಕೆ ಕಾಯ್ತಿರುವ SSLC ಮಕ್ಕಳಿಗೆ ಸಿಹಿ ಸುದ್ದಿ: ಶೇ. 10 ರಷ್ಟು ಕೃಪಾಂಕ

ಬೆಂಗಳೂರು: ಪರೀಕ್ಷೆ ಬರೆದು ಫಲಿತಾಂಶ ಎದುರು ನೋಡುತ್ತಿರುವ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಫೇಲಾಗುವುದನ್ನು ಕಡಿಮೆ ಮಾಡಲು ಶೇಕಡ 10 ರಷ್ಟು ಕೃಪಾಂಕ ನೀಡಲಾಗುತ್ತದೆ. ಮೂರು ವಿಷಯಗಳಿಗೆ ಒಟ್ಟು ಶೇಕಡ 10 ರಷ್ಟು ಮಾರ್ಕ್ಸ್ ನೀಡಲಾಗುವುದು.

ಕೆಲವೇ ಅಂಕದಿಂದ ಫೇಲ್ ಆಗುವವರಿಗೆ ಶ್ರೀರಕ್ಷೆ ನೀಡಲು ಸರ್ಕಾರ ನಿರ್ಧರಿಸಿದೆ. ಫೆಲಾಗುವುದನ್ನು ಕಡಿಮೆ ಮಾಡಲು ಗರಿಷ್ಠ ಮೂರು ವಿಷಯದಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ.

ಫೇಲಾದ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳ ಶೇಕಡ 10 ರಷ್ಟು ಕೃಪಾಂಕಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಉತ್ತಿರ್ಣವಾಗುವುದಾದರೆ ಮಾತ್ರ ಇದರ ಪ್ರಯೋಜನ ಸಿಗಲಿದೆ ಎಂದು ಹೇಳಲಾಗಿದೆ.

Exit mobile version