Site icon TUNGATARANGA

ಮೇ 16 ರಿಂದ ಶಾಲೆ ಆರಂಭ

ಬೆಂಗಳೂರು, ಮೇ.೧೧:
ಈಗಾಗಲೇ ನಿಗದಿಯಾಗಿರು ವಂತೆ ಮೇ ೧೬ ರಿಂದಲೇ ಶಾಲೆಗ ಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಮೇ 16 ರಿಂದ ಶಾಲೆಗಳನ್ನು ಆರಂಭಿಸಿ ಕಲಿಕಾ ಚೇತರಿಕೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


ಬಿಸಿಲ ಬೇಗೆ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಬೇಸಿಗೆ ರಜೆ ವಿಸ್ತರಿಸಬೇಕು. ಜೂನ್ ೧ ರಿಂದ ಶಾಲೆಗಳನ್ನು ಆರಂಭಿಸಬೇಕೆಂಬ ಒತ್ತಾಯ ಕೇಳಿ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಹವಾ ಮಾನ ಇಲಾಖೆಯಿಂದ ಮಾಹಿತಿ ಪಡೆದುಕೊಂಡೇ ೧೫ ದಿನಗಳ ಮೊದಲೇ ಶಾಲೆಗಳನ್ನು ಆರಂಭಿಸ ಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಕೊರೊನಾ ಕಾರಣದಿಂದಾಗಿ ಮಕ್ಕಳ ಕಲಿಕಾ ಮಟ್ಟದಲ್ಲಿ ಹಿನ್ನಡೆ ಯಾಗಿದೆ. ಹೀಗಾಗಿ ಮೇ ೧೬ ರಿಂದ ಶಾಲೆಗಳನ್ನು ಆರಂಭಿಸಿ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭಿಸಲಾ ಗುವುದು. ಮೇ ೧೬ ರಂದು ತುಮ ಕೂರಿನಲ್ಲಿ ಮುಖ್ಯಮಂತ್ರಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಎಸ್‌ಎಸ್‌ಎಲ್ಸಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ ಸಚಿವ ನಾಗೇಶ್, ಎಸ್‌ಎಸ್‌ಎಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣ ಗೊಂಡಿದ್ದು, ಅಂಕಗಳ ಕ್ರೋಡೀ ಕರಣ ಮಾಡಲಾಗುತ್ತಿದೆ. ಮೇ ಮೂರನೇ ವಾರ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸ ಲಾಗುವುದು ಎಂದು ಹೇಳಿದ್ದಾರೆ.

Exit mobile version