ಶಿವಮೊಗ್ಗ,ಆ.14:
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಆರತಿ ಪ್ರಕಾಶ್ ಹಾಗೂ ಅ.ಮ.ಪ್ರಕಾಶ್ ಅವರ ಪುತ್ರ ಇತರ ಗೆಳೆಯರ ಜೊತೆ ಈಜಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಕೊಚ್ಚಿಹೋದ ಘಟನೆ ವರದಿಯಾಗಿದೆ.
ಶಿವಮೊಗ್ಗ ರಾಮಿನಕೊಪ್ಪ ಸಮೀಪದ ಹಾಯ್ ಹೊಳೆ ತುಂಗಾ ಎಡದಂಡೆ ನಾಲೆ ಬಳಿ ಈ ಘಟನೆ ನಡೆದಿದೆ.
ಜನುಮ ದಿನದ ಸಂಭ್ರಮದಲ್ಲಿದ್ದ ಪ್ರಕಾಶ್ ಅವರ ಪುತ್ರ ಪ್ರತೀಶ್ ಕಾಲು ಜಾರಿಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ತನ್ನ ಮೂವರು ಸ್ನೇಹಿತರೊಂದಿಗೆ ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆಂದು ಹೋಗಿದ್ದಾರೆಂದು ಹೇಳಲಾಗಿದೆ. 24 ವರ್ಷದ ಪ್ರತೀಶ್ ಈಗ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿದ್ದು ಅವರ ಸುಳಿವು ದೊರೆತಿಲ್ಲ. ಚಿನ್ನ ಬೆಳ್ಳಿ ವ್ಯಾಪಾರ ಹಾಗೂ ತಯಾರಿಕೆಯಲ್ಲಿ ತಂದೆಯೊಂದಿಗೆ ಮಗ್ನರಾಗಿದ್ದ ಪ್ರತೀಶ್ ನೀರಿನಲ್ಲಿ ಕೊಚ್ಚಿಹೋಗಿದ್ದು ಅವರ ಹುಡುಕಾಟದ ಕಾರ್ಯ ಈಗ ಪೊಲೀಸರು ಹಾಗೂ ಅಗ್ನಿಶಾಮಕದಳದ ಮುಂದಿದೆ.
ಸ್ಥಳಕ್ಲೆ ತುಂಗಾನಗರ ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳು ಬೇಟಿನೀಡಿ ಪರಿಶೀಲನಾ ಕಾರ್ಯ ಮುಂದುವರೆಸಿದ್ದಾರೆ.